ಪ್ಯಾರಾ ಕೆನೊಯಿಂಗ್‌ ವಿಶ್ವಕಪ್‌: ಪ್ರಾಚಿ ಯಾದವ್‌ಗೆ ಕಂಚು ನವದೆಹಲಿ: ಭಾರತದ ಪ್ರಾಚಿ ಯಾದವ್‌ ಪ್ಯಾರಾ ಕೆನೊಯ್‌ ವಿಶ್ವಕಪ್‌ನಲ್ಲಿ ಕಂಚಿನ ಪದಕ ಜಯಿಸುವ ಮೂಲಕ ಇತಿಹಾಸ ಬರೆದಿದ್ದಾರೆ. ಪೋಲೆಂಡ್‌ನ ಪೋಜ್ನಾನ್‌ನಲ್ಲಿ ನಡೆದ ಟೂರ್ನಿಯ ವಿಎಲ್2 200 ಮೀಟರ್ಸ್ ವಿಭಾಗದಲ್ಲಿ ಪದಕ ಜಯಿಸಿ ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳೆ ಎನಿಸಿಕೊಂಡಿದ್ದಾರೆ. ಪ್ರಾಚಿ 1 ನಿಮಿಷ 4.71 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಆಸ್ಟ್ರೇಲಿಯಾದ ಸುಸಾನ್‌ ಸೈಪೆಲ್‌ ( 1 ನಿ. 1.54 ಸೆ.) ಚಿನ್ನ ಗೆದ್ದರು. ಬೆಳ್ಳಿ ಪದಕವು ಕೆನಡಾದ ಬ್ರಿಯಾನ್ನಾ ಹೆನ್ನೆಸ್ಸಿ (1ನಿ. 1.58 ಸೆ.) ಅವರ ಪಾಲಾಯಿತು. ಮನೀಷ್‌ ಕೌರವ್‌ (ಪುರುಷರ ಕೆಎಲ್‌3 200 ಮೀ.) ಮತ್ತು ಮಂಜೀತ್ ಸಿಂಗ್‌ (ವಿಎಲ್‌2 200 ಮೀ.) ಫೈನಲ್‌ ತಲುಪಿದ್ದಾರೆ. ವಿಎಲ್‌3 200 ಮೀ. ವಿಭಾಗದ ಸೆಮಿಫೈನಲ್‌ನಲ್ಲಿ ಜೈದೀಪ್‌ ಸೋಲು ಅನುಭವಿಸಿದರು. 2022 ಟ್ರೋಫಿ ಗೆದ್ದು ಶೇನ್ ವಾರ್ನ್‌ಗೆ ಗೌರವ ಸಲ್ಲಿಸುವ ತವಕದಲ್ಲಿ ರಾಜಸ್ಥಾನ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.