ಹೈದರಾಬಾದ್, ಲೂಧಿಯಾನ ತಂಡಗಳಿಗೆ ಪ್ರಶಸ್ತಿ ಬೆಂಗಳೂರು: ಉತ್ತಮ ಸಾಮರ್ಥ್ಯ ತೋರಿದ ಲೂಧಿಯಾನ ಮತ್ತು ಹೈದರಾಬಾದ್‌ ತಂಡಗಳು ಭಾರತ ಬ್ಯಾಸ್ಕೆಟ್‌ಬಾಲ್ ಫೆಡರೇಷನ್ ಆಯೋಜಿಸಿರುವ ಐಎನ್‌ಬಿಎಲ್‌ 3x3 ಬ್ಯಾಸ್ಕೆಟ್‌ಬಾಲ್ ಲೀಗ್‌ನ ಕ್ರಮವಾಗಿ ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದವು. ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪುರುಷರ ವಿಭಾಗದ ಫೈನಲ್ ಪಂದ್ಯದಲ್ಲಿ ಲೂಧಿಯಾನ 17–10ರಿಂದ ಮುಂಬೈ ತಂಡಕ್ಕೆ ಸೋಲುಣಿಸಿತು. ಸರ್ಫಿಂಗ್‌: ರಮೇಶ್‌ ಮಡಿಲಿಗೆ ಚಾಂಪಿಯನ್‌ ಪಟ್ಟ ಮಹಿಳೆಯರ ವಿಭಾಗದಲ್ಲಿ ಹೈದರಾಬಾದ್‌ 21–18ರಿಂದ ಕೋಲ್ಕತ್ತ ತಂಡವನ್ನು ಮಣಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು. 18 ವರ್ಷದೊಳಗಿನವರ ಪುರುಷರ ವಿಭಾಗದಲ್ಲಿ ಜೈಪುರ ತಂಡವು ಅಗ್ರಸ್ಥಾನ ಗಳಿಸಿತು. ಫೈನಲ್‌ನಲ್ಲಿ ಈ ತಂಡವು 21–10ರಿಂದ ಚಂಡೀಗಡ ತಂಡವನ್ನು ಸೋಲಿಸಿತು. ಇಂದೋರ್ ತಂಡವು 18 ವರ್ಷದೊಳಗಿನ ಮಹಿಳೆಯರ ವಿಭಾಗದ ಫೈನಲ್‌ನಲ್ಲಿ 14–9ರಿಂದ ಬಿಲಾಯಿ ತಂಡವನ್ನು ಮಣಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.