ವಿಶ್ವಕಪ್ ಶೂಟಿಂಗ್‌: ಅಂಜುಮ್‌ಗೆ ಬೆಳ್ಳಿ ನವದೆಹಲಿ: ಭಾರ ತದ ಅನುಭವಿ ಶೂಟರ್‌ ಅಂಜುಮ್ ಮೌದ್ಗಿಲ್ ಅವರು ಐಎಸ್‌ಎಸ್‌ಎಫ್‌ಶೂಟಿಂಗ್‌ ವಿಶ್ವಕಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ. ಅಜರ್‌ಬೈಜಾನ್‌ನ ಬಾಕುನಲ್ಲಿ ನಡೆಯುತ್ತಿರುವ ಟೂರ್ನಿಯ ಮಹಿಳೆಯರ 50 ಮೀಟರ್ಸ್ ರೈಫಲ್ ತ್ರಿ ಪೋಸಿಷನ್ಸ್‌ನಲ್ಲಿ ಅವರಿಗೆ ಪದಕ ಒಲಿದಿದೆ. ಪುರುಷರ 3 ಪೋಸಿಷನ್ಸ್‌ನಲ್ಲಿ ಭಾರತ ತಂಡವೂ ಬೆಳ್ಳಿ ಪದಕ ತನ್ನದಾಗಿಸಿಕೊಂಡಿತು. ಫೈನಲ್ ಪಂದ್ಯದಲ್ಲಿಶುಕ್ರವಾರ ಅಂಜುಮ್‌ 12–16ರಿಂದ ಡೆನ್ಮಾರ್ಕ್‌ನ ರಿಕ್ಕೆ ಮಯಿಂಗ್ ಇಬ್ಸೆನ್ ವಿರುದ್ಧ ಸೋತರು.ವಿಶ್ವ ಚಾಂಪಿಯನ್‌ಷಿಪ್ ಬೆಳ್ಳಿ ಪದಕ ವಿಜೇತೆಯಾಗಿರುವ ಅಂಜುಮ್‌, ರ‍್ಯಾಂಕಿಂಗ್ ಸುತ್ತಿನಲ್ಲಿ ಗುರುವಾರ 600ರ ಪೈಕಿ 587 ಪಾಯಿಂಟ್ಸ್ ಕಲೆಹಾಕಿದ್ದರು. 60 ಶೂಟರ್‌ಗಳ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದರು. ಅಂಜುಮ್ ಅವರಿಗೆ ವಿಶ್ವಕಪ್‌ನಲ್ಲಿ ಇದು ಎರಡನೇ ಬೆಳ್ಳಿ ಪದಕವಾಗಿದೆ. ಪುರುಷರ 3 ಪೋಸಿಷನ್ಸ್‌ನಲ್ಲಿ ಫೈನಲ್‌ನಲ್ಲಿ ಸ್ವಪ್ನಿಲ್‌, ದೀಪಕ್‌ ಕುಮಾರ್ ಮತ್ತು ಗೋಲ್ಡಿ ಗುರ್ಜರ್ ಅವರಿದ್ದ ತಂಡವು 7–17ರಿಂದ ಕ್ರೊವೇಷ್ಯಾ ಶೂಟರ್‌ಗಳ ಎದುರು ಸೋತಿತು. ಉಕ್ರೇನ್ ತಂಡವು ಕಂಚು ಗೆದ್ದುಕೊಂಡಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.