ಸಮಗ್ರ ತನಿಖೆ: ಸಾಯ್ ನವದೆಹಲಿ (ಪಿಟಿಐ): ಮಹಿಳಾ ಸೈಕ್ಲಿಸ್ಟ್‌ವೊಬ್ಬರು ರಾಷ್ಟ್ರೀಯ ತಂಡದ ಕೋಚ್‌ ಆರ್‌.ಕೆ.ಶರ್ಮ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಲು ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ನಿರ್ಧರಿಸಿದೆ. ಸ್ಲೊವೇನಿಯದಲ್ಲಿ ತರಬೇತಿ ಶಿಬಿರದ ವೇಳೆ ಕೋಚ್‌ ಅಸಭ್ಯವಾಗಿ ವರ್ತಿಸಿದ್ದಾಗಿ ಸೈಕ್ಲಿಸ್ಟ್‌ ದೂರು ನೀಡಿದ್ದರು. ’ಸಾಯ್‌ ತನಿಖಾ ತಂಡವು, ದೂರುದಾರ ಸೈಕ್ಲಿಸ್ಟ್‌ ಹಾಗೂ ಆರೋಪ ಎದುರಿಸುತ್ತಿರುವ ಕೋಚ್‌ ಅವರನ್ನು ಈಗಾಗಲೇ ವಿಚಾರಣೆಗೆ ಒಳಪಡಿಸಿದೆ. ತಂಡದಲ್ಲಿದ್ದ ಇತರ ಐವರು ಸೈಕ್ಲಿಸ್ಟ್‌ಗಳನ್ನೂ ಮಾತನಾಡಿಸಿ, ಮಾಹಿತಿ ಕಲೆಹಾಕಲಾಗುವುದು‘ ಎಂದು ಪ್ರಾಧಿಕಾರದ ಮೂಲಗಳು ತಿಳಿಸಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.