ಏಷ್ಯನ್‌ ಪ್ಯಾರಾ ಗೇಮ್ಸ್‌ಗೆ ಅಶೋಕ್, ಸುಧೀರ್ ನವದೆಹಲಿ: ಭಾರತದ ಪ್ಯಾರಾ ಪವರ್‌ಲಿಫ್ಟರ್‌ಗಳಾದ ಅಶೋಕ್‌ ಮತ್ತು ಸುಧೀರ್‌ ಅವರು ಹಾಂಗ್‌ಜೌನಲ್ಲಿ ನಡೆಯಲಿರುವ ಏಷ್ಯನ್‌ ಪ್ಯಾರಾ ಕೂಟಕ್ಕೆ ಅರ್ಹತೆ ಪಡೆದುಕೊಂಡರು. ದಕ್ಷಿಣ ಕೊರಿಯಾದಲ್ಲಿ ಮಂಗಳವಾರ ಕೊನೆಗೊಂಡ ಏಷ್ಯಾ–ಒಸೀನಿಯಾ ಓಪನ್ ಪವರ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಅವರು ಪದಕ ಗೆದ್ದು ಈ ಸಾಧನೆ ಮಾಡಿದರು. ಅಶೋಕ್‌, ಪುರುಷರ 65 ಕೆ.ಜಿ ವಿಭಾಗದಲ್ಲಿ ಚಿನ್ನ ಗೆದ್ದರೆ, ಸುಧೀರ್‌ 88 ಕೆ.ಜಿ ವಿಭಾಗದಲ್ಲಿ ಕಂಚು ಜಯಿಸಿದರು. ಭಾರತದ ಪರಮ್‌ಜೀತ್‌ ಕುಮಾರ್‌ (ಪುರುಷರ 49 ಕೆ.ಜಿ) ಮತ್ತು ಸಕೀನಾ ಖಾತೂನ್ (ಮಹಿಳೆಯರ 45 ಕೆ.ಜಿ) ಅವರು ಈ ಮೊದಲೇ ಏಷ್ಯನ್‌ ಪ್ಯಾರಾ ಕೂಟಕ್ಕೆ ಅರ್ಹತೆ ಪಡೆದುಕೊಂಡಿದ್ದರು. ಏಷ್ಯಾ–ಒಸೀನಿಯಾ ಓಪನ್ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಆರು ಚಿನ್ನ ಸೇರಿದಂತೆ ಒಟ್ಟು 22 ಪದಕಗಳನ್ನು ಗೆದ್ದುಕೊಂಡಿದೆ. ’ಅಂತರರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ನಮ್ಮ ಪವರ್‌ಲಿಫ್ಟರ್‌ಗಳ ಅತ್ಯುತ್ತಮ ಸಾಧನೆ ಇದಾಗಿದೆ. ಹಲವು ಪದಕಗಳನ್ನು ಗೆಲ್ಲುವ ಜತೆಯಲ್ಲೇ, ಏಷ್ಯನ್‌ ಪ್ಯಾರಾ ಗೇಮ್ಸ್‌ಗೆ ಅರ್ಹತೆಯನ್ನೂ ಪಡೆದುಕೊಂಡಿದ್ದೇವೆ‘ ಎಂದು ಭಾರತ ತಂಡದ ಕೋಚ್ ಜೆ.ಪಿ.ಸಿಂಗ್‌ ಪ್ರತಿಕ್ರಿಯಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.