ಬ್ಯಾಸ್ಕೆಟ್‌ಬಾಲ್‌: ಭಾರತಕ್ಕೆ 5ನೇ ಸ್ಥಾನ ಬೆಂಗಳೂರು: ಭಾರತ ಬಾಲಕರ ತಂಡದವರು ದೋಹಾದಲ್ಲಿ ನಡೆದ ಫಿಬಾ 16 ವರ್ಷದೊಳಗಿನವರ ಏಷ್ಯನ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಐದನೇ ಸ್ಥಾನ ಪಡೆದುಕೊಂಡರು. ಐದು ಮತ್ತು ಆರನೇ ಸ್ಥಾನವನ್ನು ನಿರ್ಧರಿಸಲು ಭಾನುವಾರ ನಡೆದ ಪಂದ್ಯದಲ್ಲಿ ಭಾರತ 90–80 ರಲ್ಲಿ ಕೊರಿಯಾ ತಂಡವನ್ನು ಪರಾಭವಗೊಳಿಸಿತು. ಮೊದಲ ಕ್ವಾರ್ಟರ್‌ನಿಂದಲೇ ಮೇಲುಗೈ ಸಾಧಿಸಿದ ಭಾರತ ಅದನ್ನು ಕೊನೆಯವರೆಗೂ ಕಾಪಾ ಡಿಕೊಂಡಿತು. ವಿರಾಮದ ವೇಳೆಗೆ 71–53 ರಲ್ಲಿ ಮುನ್ನಡೆ ಪಡೆದಿತ್ತು. ಕೊನೆಯ ಅವಧಿಯಲ್ಲಿ ಕೊರಿಯಾ ಮರುಹೋರಾಟ ನಡೆಸಿದರೂ, ಭಾರತ ಎಚ್ಚರಿಕೆಯ ಆಟವಾಡಿ 10 ಪಾಯಿಂಟ್‌ಗಳಿಂದ ಪಂದ್ಯವನ್ನು ಜಯಿಸಿತು. 29 ಪಾಯಿಂಟ್ಸ್‌ ಗಳಿಸಿದ ಲೋಕೇಂದ್ರ ಸಿಂಗ್ ’ಟಾಪ್‌ ಸ್ಕೋರರ್‌‘ ಎನಿಸಿಕೊಂಡರು. ಜೈದೀಪ್‌ ರಾಥೋಡ್ 20, ಹರ್ಷ ದಾಗರ್ 19 ಹಾಗೂ ಕುಶಾಲ್‌ ಸಿಂಗ್‌ 18 ಪಾಯಿಂಟ್‌ ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.