ಕೊಕ್ಕೊ: ಕ್ಯಾಪ್ರಿ ಗ್ಲೋಬಲ್‌, ಕೆಎಲ್‌ಒ ಸ್ಪೋರ್ಟ್ಸ್‌ ಮಾಲೀಕತ್ವ ಬೆಂಗಳೂರು: ಕ್ಯಾಪ್ರಿ ಗ್ಲೋಬಲ್‌ ಮತ್ತುಕೆಎಲ್ಒ ಸ್ಪೋರ್ಟ್ಸ್ ಸಂಸ್ಥೆಗಳು ಅಲ್ಟಿಮೇಟ್‌ ಕೊಕ್ಕೊ ಲೀಗ್‌ನಲ್ಲಿ (ಯುಕೆಕೆ) ಕ್ರಮವಾಗಿ ರಾಜಸ್ಥಾನ ಮತ್ತು ಚೆನ್ನೈ ತಂಡಗಳ ಮಾಲೀಕತ್ವ ವಹಿಸಿಕೊಂಡಿವೆ. ಕೆಎಲ್ಒ ಸ್ಪೋರ್ಟ್ಸ್ ಮಾಲೀಕತ್ವದ ತಂಡವನ್ನು ಚೆನ್ನೈ ಕ್ವಿಕ್ ಗನ್ಸ್ ಎಂದು ಕರೆಯಲಾಗುತ್ತದೆ. ಕ್ಯಾಪ್ರಿ ಗ್ಲೋಬಲ್‌ನ ರಾಜಸ್ಥಾನ ಮೂಲದ ಫ್ರಾಂಚೈಸಿಗೆ ಇನ್ನೂ ಹೆಸರಿಡಲಾಗಿಲ್ಲ. ಕೆಎಲ್ಒ ಸ್ಪೋರ್ಟ್ಸ್ ಸಂಜಯ್ ಜುಪುಡಿ ಮತ್ತು ಶ್ರೀನಾಥ್ ಚಿತ್ತೂರಿ ಅವರ ಸಹ-ಮಾಲೀಕತ್ವದಲ್ಲಿದೆ. ಡಾಬರ್‌ ಸಮೂಹದ ಮುಖ್ಯಸ್ಥ ಅಮಿತ್‌ ಬರ್ಮನ್‌ ಅವರು ಕೊಕ್ಕೊ ಫೆಡರೇಷನ್‌ ಆಫ್‌ ಇಂಡಿಯಾ (ಕೆಕೆಎಫ್‌ಐ) ಸಹಯೋಗದಲ್ಲಿ ಐಪಿಎಲ್‌ ಮಾದರಿಯಲ್ಲಿ ಫ್ರಾಂಚೈಸಿ ಆಧಾರಿತ ಕೊಕ್ಕೊ ಲೀಗ್‌ ಆರಂಭಿಸಲು ನಿರ್ಧರಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.