ಟ್ರಯಲ್ಸ್‌: ಹಿಂದೆ ಸರಿದ ಮೇರಿ ಕೋಮ್ ನವದೆಹಲಿ (ಪಿಟಿಐ): ಮಹಿಳಾ ಬಾಕ್ಸರ್‌ ಮೇರಿ ಕೋಮ್‌ ಅವರು ಗಾಯದ ಕಾರಣ ಕಾಮನ್‌ವೆಲ್ತ್‌ ಕ್ರೀಡಾಕೂಟದ ಆಯ್ಕೆ ಟ್ರಯಲ್ಸ್‌ನಿಂದ ಅರ್ಧದಲ್ಲೇ ಹಿಂದೆ ಸರಿದಿದ್ದಾರೆ. ಇಲ್ಲಿನ ಇಂದಿರಾಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟ್ರಯಲ್ಸ್‌ನಲ್ಲಿ 48 ಕೆ.ಜಿ ವಿಭಾಗದ ಸೆಮಿಫೈನಲ್‌ನಲ್ಲಿ ಹರಿಯಾಣದ ನೀತು ವಿರುದ್ಧದ ಸೆಣಸಾಟದ ವೇಳೆ ಅವರು ಗಾಯಗೊಂಡರು. 2018ರ ಕಾಮನ್‌ವೆಲ್ತ್ ಕೂಟದಲ್ಲಿ ಚಿನ್ನ ಜಯಿಸಿದ್ದ ಮೇರಿ, ಮೊದಲ ಸುತ್ತಿನಲ್ಲೇ ನೆಲಕ್ಕುರುಳಿದರು. ಆ ಬಳಿಕ ಎದ್ದು ಕೆಲಹೊತ್ತು ಹೋರಾಟ ಮುಂದುವರಿಸಿದರಾದರೂ, ದೇಹದ ಮೇಲೆ ನಿಯಂತ್ರಣ ಸಾಧಿಸಲಾಗದೆ ಹಿಂದೆ ಸರಿದರು. ಪಂದ್ಯ ನಿಲ್ಲಿಸಿದ ರೆಫರಿ, ನೀತು ಅವರನ್ನು ವಿಜೇತ ಎಂದು ಘೋಷಿಸಿದರು. ಕಾಮನ್‌ವೆಲ್ತ್‌ ಕೂಟ ಮುಂದಿನ ತಿಂಗಳು ಬರ್ಮಿಂಗ್‌ಹ್ಯಾಂನಲ್ಲಿ ನಡೆಯಲಿದೆ. ಮೇರಿ ಅವರು ಈ ಕೂಟದ ಮೇಲೆ ಗಮನಕೇಂದ್ರೀಕರಿಸಲು ವಿಶ್ವ ಚಾಂಪಿಯನ್‌ಷಿಪ್‌ ಮತ್ತು ಏಷ್ಯನ್‌ ಗೇಮ್ಸ್‌ನಿಂದ ಹಿಂದೆ ಸರಿದಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.