ಬ್ಯಾಡ್ಮಿಂಟನ್‌: ಸಮೀರ್‌ ವರ್ಮಾಗೆ ಸೋಲು ಜಕಾರ್ತ: ಭಾರತದ ಸಮೀರ್‌ ವರ್ಮಾ ಅವರು ಇಂಡೊನೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಎರಡನೇ ಸುತ್ತಿನಲ್ಲಿ ಸೋಲು ಅನುಭವಿಸಿದರು. ಗುರುವಾರ ನಡೆದ ಪಂದ್ಯದಲ್ಲಿ ಸಮೀರ್‌ 10–21, 13–21 ರಲ್ಲಿ ಮಲೇಷ್ಯಾದ ಲೀ ಜೀ ಜಿಯಾ ಎದುರು ಸೋತರು. ಲೀ ವಿರುದ್ಧದ ಏಳು ಹಣಾಹಣಿಗಳಲ್ಲಿ ಸಮೀರ್‌ಗೆ ಎದುರಾದ ಐದನೇ ಸೋಲು ಇದು. ಈ ಪಂದ್ಯ 43 ನಿಮಿಷಗಳಲ್ಲಿ ಕೊನೆಗೊಂಡಿತು. ಮಹಿಳೆಯರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಸಿಕ್ಕಿ ರೆಡ್ಡಿ ಜೋಡಿ ಕೂಡಾ ಸೋಲು ಅನುಭವಿಸಿತು. ಇಲ್ಲಿ ಅಗ್ರಶ್ರೇಯಾಂಕ ಹೊಂದಿರುವ ಚೀನಾದ ಚೆನ್‌ ಕ್ವಿಂಗ್ ಮತ್ತು ಜಿಯಾ ಯಿಫಾನ್‌ ಅವರು 21–16, 21–13 ರಲ್ಲಿ ಭಾರತದ ಜೋಡಿಗೆ ಸೋಲುಣಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.