ಗಾಲ್ಫ್‌: ಜಂಟಿ ಮುನ್ನಡೆಯಲ್ಲಿ ಪ್ರಣವಿ, ರಿಧಿಮಾ ಬೆಂಗಳೂರು: ಪ್ರಣವಿ ಅರಸ್‌ ಮತ್ತು ರಿಧಿಮಾ ದಿಲಾವರಿ ಅವರು ಇಲ್ಲಿ ನಡೆಯುತ್ತಿರುವ ಹೀರೊ ಮಹಿಳಾ ಪ್ರೊ ಗಾಲ್ಫ್‌ ಟೂರ್‌ನ ಎಂಟನೇ ಲೆಗ್‌ ಟೂರ್ನಿಯಲ್ಲಿ ಎರಡನೇ ಸುತ್ತಿನ ಬಳಿಕ ಜಂಟಿ ಮುನ್ನಡೆಯಲ್ಲಿದ್ದಾರೆ. ಮೊದಲ ಸುತ್ತಿನಲ್ಲಿ ನೀರಸ ಪ್ರದರ್ಶನ ನೀಡಿದ್ದ ಪ್ರಣವಿ, ಗುರುವಾರ ಲಯ ಕಂಡುಕೊಂಡರು. ಇದೀಗ ಅವರು 143 ಸ್ಕೋರ್‌ಗಳನ್ನು ಹೊಂದಿದ್ದಾರೆ. ಮೊದಲ ದಿನದ ಸ್ಪರ್ಧೆ ಕೊನೆಗೊಳಿಸಲು 74 ಅವಕಾಶಗಳನ್ನು ಬಳಸಿಕೊಂಡಿದ್ದ ಪ್ರಣವಿ, ಎರಡನೇ ದಿನ ನಿಖರ ಪ್ರದರ್ಶನ (69) ನೀಡಿದರು. ರಿಧಿಮಾ ಅವರು ಮೊದಲ ದಿನದ ಪ್ರದರ್ಶನ (69) ಪುನರಾವರ್ತಿಸುವಲ್ಲಿ ವಿಫಲರಾಗಿ 74 ಅವಕಾಶಗಳನ್ನು ಬಳಸಿಕೊಂಡರು. ಅಫ್ಶಾನ್‌ ಫಾತಿಮಾ (73–73) ಮೂರನೇ ಸ್ಥಾನದಲ್ಲಿದ್ದಾರೆ. ಸೆಹೆರ್‌ ಅತ್ವಾಲ್ (76–71), ಜಾಹ್ನವಿ ಬಕ್ಷಿ (73–74) ಮತ್ತು ತ್ರಿಮನ್‌ ಸುಲಜಾ (72–75) ಜಂಟಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.