ಪಾಕ್‌ ಸೈಕ್ಲಿಸ್ಟ್‌ಗಳಿಗೆ ಭಾರತದ ವೀಸಾ ಕರಾಚಿ:ನವದೆಹಲಿಯಲ್ಲಿ ಭಾನುವಾರ ಆರಂಭವಾಗಲಿರುವ ಏಷ್ಯನ್‌ ಎಲೈಟ್‌ ಮತ್ತು ಜೂನಿಯರ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಏಳು ಸದಸ್ಯರ ಪಾಕಿಸ್ತಾನ ತಂಡ ಪಾಲ್ಗೊಳ್ಳಲಿದೆ. ಪಾಕ್‌ ತಂಡದ ಸದಸ್ಯರಿಗೆ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ವೀಸಾ ನೀಡಿದೆ. ‘ಐವರು ಸೈಕ್ಲಿಸ್ಟ್‌ಗಳು ಮತ್ತು ಇಬ್ಬರು ಅಧಿಕಾರಿಗಳನ್ನೊಳಗೊಂಡ ನಮ್ಮ ತಂಡ ವಾಘಾ ಗಡಿ ಮೂಲಕ ಭಾರತಕ್ಕೆ ಪ್ರಯಾಣ ಬೆಳೆಸಿದೆ’ ಎಂದು ಪಾಕಿಸ್ತಾನ ಸೈಕ್ಲಿಂಗ್‌ ಫೆಡರೇಷನ್‌ನ ಕಾರ್ಯದರ್ಶಿ ಮೊಅಝ್ಝಮ್ ಖಾನ್‌ ಹೇಳಿದ್ದಾರೆ. ‘ತಂಡದ ಜತೆ ಭಾರತಕ್ಕೆ ಪ್ರಯಾಣಿಸಬೇಕಿದ್ದ ಒಬ್ಬ ಅಧಿಕಾರಿಗೆ ಮಾತ್ರ ವೀಸಾ ದೊರೆತಿಲ್ಲ. ಆದರೆ ತಂಡದ ಇತರ ಸದಸ್ಯರಿಗೆ ವೀಸಾ ನೀಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ, ವೀಸಾ ನೀಡಿರುವುದು ಒಳ್ಳೆಯ ಬೆಳವಣಿಗೆ‘ ಎಂದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.