ಬರ್ಲಿನ್ ಓಪನ್ ಟೆನಿಸ್: ಸೆಮಿಫೈನಲ್‌ಗೆ ಕೊಕೊ ಗಾಫ್‌ ಬರ್ಲಿನ್ (ಎಪಿ): ಅಮೆರಿಕದ ಕೊಕೊ ಗಾಫ್ ಬರ್ಲಿನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಶುಕ್ರವಾರ ಸೆಮಿಫೈನಲ್‌ಗೆ ಲಗ್ಗೆ ಇಟ್ಟರು. ಇದೇ ಮೊದಲ ಸಲ ಅವರು ಹುಲ್ಲಿನಂಕಣದಲ್ಲಿ ಈ ಸಾಧನೆ ಮಾಡಿದರು. ಎಂಟರ ಘಟ್ಟದ ಪಂದ್ಯದಲ್ಲಿ 7–5, 6–4ರಿಂದ ಕ್ಯಾರೊಲಿನಾ ಪ್ಲಿಸ್ಕೋವಾ ವಿರುದ್ಧ ಜಯಿಸಿದರು. 18 ವರ್ಷದ ಗಾಫ್‌ ಈಚೆಗೆ ಫ್ರೆಂಚ್‌ ಓಪನ್‌ ಟೂರ್ನಿಯ ಫೈನಲ್ ಪ್ರವೇಶಿಸಿದ್ದರು.ಅವರು ಸೆಮಿಫೈನಲ್‌ನಲ್ಲಿ ಒನ್ಸ್ ಜಬೇರ್ ವಿರುದ್ಧ ಸೆಣಸಲಿದ್ದಾರೆ. ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ ನಾಲ್ಕನೇ ಶ್ರೇಯಾಂಕದ ಜಬೇರ್ 6–7, 6–2, 6–2ರಿಂದ ಅಲಿಯಾಕಸ್ಸಾಂಡ್ರಾ ಸಾಸ್ನೊವಿಚ್ ವಿರುದ್ಧ ಜಯಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.