ಸ್ಕ್ವಾಷ್‌: ಅನಾಹತ್‌ ಸಿಂಗ್‌ಗೆ ಚಿನ್ನ ನವದೆಹಲಿ (ಪಿಟಿಐ): ಭಾರತದ ಯುವ ಸ್ಪರ್ಧಿ ಅನಾಹತ್‌ ಸಿಂಗ್‌ ಅವರು ಥಾಯ್ಲೆಂಡ್‌ನ ಪಟ್ಟಾಯದಲ್ಲಿ ನಡೆದ ಏಷ್ಯನ್‌ ಜೂನಿಯರ್‌ ಸ್ಕ್ವಾಷ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದರು. ಭಾನುವಾರ ನಡೆದ ಬಾಲಕಿಯರ 15 ವರ್ಷದೊಳಗಿನ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಅನಾಹತ್ 3–0 ರಲ್ಲಿ ಹಾಂಗ್‌ಕಾಂಗ್‌ನ ವೊಂಗ್ ಎನಾ ಅವರನ್ನು ಮಣಿಸಿದರು. 14 ವರ್ಷದ ಅನಾಹತ್‌ ಟೂರ್ನಿಯುದ್ದಕ್ಕೂ ಪ್ರಭಾವಿ ಪ್ರದರ್ಶನ ನೀಡಿ, ಯಾವುದೇ ಗೇಮ್‌ ಕಳೆದುಕೊಳ್ಳದೆ ಫೈನಲ್‌ ಪ್ರವೇಶಿಸಿದ್ದರು. ಸೆಮಿಫೈನಲ್‌ನಲ್ಲಿ ಅವರು 3–0 ರಲ್ಲಿ ಅಗ್ರ ಶ್ರೇಯಾಂಕದ ಆಟಗಾರ್ತಿ ಮಲೇಷ್ಯಾದ ವಿಟ್ನಿ ಇಸಾಬೆಲ್‌ಗೆ ಆಘಾತ ನೀಡಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.