ಬಾಕ್ಸಿಂಗ್: ಲಾಲ್ಬಿಯಾಕಿಮಗೆ ಸೋಲು ದುಬೈ: ಭಾರತದ ಬಾಕ್ಸರ್‌ ಲಾಲ್ಬಿಯಾಕಿಮ ಅವರು ಡಬ್ಲ್ಯುಬಿಸಿ ಏಷ್ಯನ್‌ ಬಾಕ್ಸಿಂಗ್‌ ಕೌನ್ಸಿಲ್‌ನ ಲೈಟ್‌ ಫ್ಲೈವೇಟ್‌ ವಿಭಾಗದ ಕಿರೀಟಕ್ಕಾಗಿ ನಡೆದ ಹೋರಾಟದಲ್ಲಿ ಸೋಲು ಅನುಭವಿಸಿದರು. ದುಬೈ ವರ್ಲ್ಡ್‌ ಟ್ರೇಡ್‌ ಸೆಂಟರ್‌ನಲ್ಲಿ ಶನಿವಾರ ರಾತ್ರಿ ನಡೆದ 10 ಸುತ್ತುಗಳ ಪೈಪೋಟಿಯಲ್ಲಿ ಅವರು ಫಿಲಿಪ್ಪೀನ್ಸ್‌ನ ಜೇಸನ್ ವೇಸನ್‌ ಕೈಯಲ್ಲಿ ಪರಾಭವಗೊಂಡರು. ವೃತ್ತಿ‍ಪರ ಬಾಕ್ಸಿಂಗ್‌ನಲ್ಲಿ ಮಿಜೋರಾಂನ ಬಾಕ್ಸರ್‌ಗೆ ಎದುರಾದ ಮೊದಲ ಸೋಲು ಇದು. ಈ ಹಿಂದಿನ ನಾಲ್ಕು ಹೋರಾಟಗಳಲ್ಲಿ ಅವರು ಜಯ ಸಾಧಿಸಿದ್ದರು. ಡಬ್ಲ್ಯುಬಿಸಿ ಬಾಕ್ಸಿಂಗ್‌ನಲ್ಲಿ ಜೇಸನ್‌ಗೆ ದೊರೆತ ಸತತ 10ನೇ ಗೆಲುವು ಇದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.