ಟೇಬಲ್ ಟೆನಿಸ್‌: ಯಶಸ್ವಿನಿಗೆ ಕಂಚು ಬೆಂಗಳೂರು: ಕರ್ನಾಟಕದ ಯಶಸ್ವಿನಿ ಘೋರ್ಪಡೆ ಕೇರಳದ ಅಲೆಪ್ಪಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಯೂತ್ ಮತ್ತು ಜೂನಿಯರ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. 19 ವರ್ಷದೊಳಗಿನವರ ಬಾಲಕಿಯರ ವಿಭಾಗ‌ದ ಸೆಮಿಫೈನಲ್‌ ಹಣಾಹಣಿಯಲ್ಲಿ ಯಶಸ್ವಿನಿ 4-11, 7-11, 9-11, 10-12ರಿಂದ ತಮಿಳುನಾಡಿನ ಮಣಿ ನಿತ್ಯಾಶ್ರೀ ಎದುರು ಸೋತರು. ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ7-11, 11-5, 9-11, 11-5, 11-3, 11-9ರಿಂದ ದೆಹಲಿಯ ರಿಧಿಮಾ ವಿರುದ್ಧ ಜಯಿಸಿದ್ದ ಯಶಸ್ವಿನಿ, ಎಂಟರಘಟ್ಟದ ಪಂದ್ಯದಲ್ಲಿ11-5, 11-9, 11-3, 11-5ರಿಂದ ಮಹಾರಾಷ್ಟ್ರದ ತನೇಶಾ ವಿರುದ್ಧ ಗೆಲುವು ಸಾಧಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.