ಸೈಕ್ಲಿಂಗ್: ಭಾರತಕ್ಕೆ ಮತ್ತೆ 8 ಪದಕ ನವದೆಹಲಿ (ಪಿಟಿಐ): ಏಷ್ಯನ್‌ ಟ್ರ್ಯಾಕ್‌ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದ ಭಾರತ ತಂಡ, ಮತ್ತೆ ಎಂಟು ಪದಕಗಳನ್ನು ಗೆದ್ದುಕೊಂಡಿತು. 41ನೇ ಸೀನಿಯರ್‌, 28ನೇ ಜೂನಿಯರ್‌ ಏಷ್ಯನ್‌ ಟ್ರ್ಯಾಕ್‌ ಮತ್ತು 10ನೇ ಪ್ಯಾರಾ ಟ್ರ್ಯಾಕ್‌ ಸೈಕ್ಲಿಂಗ್‌ನಲ್ಲಿ ಭಾರತ ಎರಡು ದಿನಗಳಲ್ಲಿ ಒಟ್ಟು 18 ಪದಕಗಳನ್ನು ಜಯಿಸಿದೆ. ಭಾರತದ ಸ್ಪರ್ಧಿಗಳು ಭಾನುವಾರ 1 ಚಿನ್ನ, 3 ಬೆಳ್ಳಿ ಹಾಗೂ 4 ಕಂಚಿನ ಪದಕಗಳನ್ನು ಪಡೆದುಕೊಂಡರು. ಒಟ್ಟು 12 ವಿಭಾಗಗಳಲ್ಲಿ ಫೈನಲ್‌ ನಡೆದವು. ಜೂನಿಯರ್‌ ವಿಭಾಗದಲ್ಲಿ ಪೂಜಾ ಡನೋಲೆ ಅವರು 2:31.277 ಸಮಯದೊಂದಿಗೆ ಮೂರನೇ ಸ್ಥಾನ ಪಡೆದರಲ್ಲದೆ, ತಮ್ಮದೇ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು (2:37.410) ಅವರು ಉತ್ತಮಪಡಿಸಿಕೊಂಡರು. ಟ್ರ್ಯಾಕ್ ಸೈಕ್ಲಿಸ್ಟ್‌ ಮಯೂರಿ 500 ಮೀ. ಟೈಮ್‌ ಟ್ರಯಲ್‌ನಲ್ಲಿ ಕಂಚು ಜಯಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.