ಶೂಟಿಂಗ್‌: ಫೈನಲ್‌ಗೆ ಅರ್ಜುನ್‌, ಪಾರ್ಥ್ ಚಾಂಗ್ವಾನ್‌, ದಕ್ಷಿಣ ಕೊರಿಯಾ (ಪಿಟಿಐ): ಭಾರತದ ಅರ್ಜುನ್ ಬಬುತಾ ಮತ್ತು ಪಾರ್ಥ್‌ ಮಖೀಜಾ ಇಲ್ಲಿ ನಡೆಯುತ್ತಿರುವ ಐಎಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್ ಟೂರ್ನಿಯ10 ಮೀಟರ್ಸ್ ಏರ್‌ ರೈಫಲ್ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ. 53 ಶೂಟರ್‌ಗಳಿದ್ದ ಅರ್ಹತಾ ಸ್ಪರ್ಧೆಯಲ್ಲಿ ಅರ್ಜುನ್‌ 630.5 ಪಾಯಿಂಟ್ಸ್‌ನೊಂದಿಗೆ ಎರಡನೇ ಸ್ಥಾನ ಗಳಿಸಿದರು. ಪಾರ್ಥ್‌ (628.4) ಐದನೇ ಸ್ಥಾನ ಗಳಿಸಿದರು. ಈ ವಿಭಾಗದ ಫೈನಲ್ ಸೋಮವಾರ ನಡೆಯಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.