ನಯೀಂ ಹ್ಯಾಟ್ರಿಕ್‌ ಗೋಲು ಬೆಂಗಳೂರು: ನಯೀಂ ಗಳಿಸಿದ ಹ್ಯಾಟ್ರಿಕ್ ಗೋಲುಗಳ ಬಲದಿಂದ ಅಕೌಂಟಂಟ್‌ ಜನರಲ್ ಆಫೀಸ್‌ ರಿಕ್ರಿಯೇಷನ್‌ ಕ್ಲಬ್‌ (ಎಜಿಒಆರ್‌ಸಿ) ತಂಡವು ಹಾಕಿ ಕರ್ನಾಟಕ ಲೀಗ್ ಚಾಂಪಿಯನ್‌ಷಿಪ್‌ನಲ್ಲಿ ಭರ್ಜರಿ ಜಯ ಗಳಿಸಿತು. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಕಿ ಅಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿಎಜಿಒಆರ್‌ಸಿ 7–1ರಿಂದ ಪೋಸ್ಟಲ್ ತಂಡಕ್ಕೆ ಸೋಲುಣಿಸಿತು. ನಯೀಂ 24, 50 ಮತ್ತು 59ನೇ ನಿಮಿಷಗಳಲ್ಲಿ ಕೈಚಳಕ ತೋರಿದರು. ನಿತಿನ್ ತಿಮ್ಮಯ್ಯ (14ನೇ ನಿ.), ಚಿರಂತ್ ಸೋಮಣ್ಣ (18ನೇ ನಿ.), ಎಂ.ಬಿ. ಅಯ್ಯಪ್ಪ (37ನೇ ನಿ.) ಮತ್ತು ಜಯಪ್ರಕಾಶ್‌ (52ನೇ ನಿ.) ವಿಜೇತ ತಂಡದ ಪರ ಗೋಲು ಗಳಿಸಿದರು. ಪೋಸ್ಟಲ್ ತಂಡದ ಅಜಿತ್ ವಿ.ಎಂ. (11ನೇ ನಿ.) ಒಂದು ಗೋಲು ಹೊಡೆದರು. ಮತ್ತೊಂದು ಹಣಾಹಣಿಯಲ್ಲಿ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ತಂಡವು 3–1ರಿಂದ ಡಿವೈಇಎಸ್‌ ‘ಬಿ’ ತಂಡವನ್ನು 3–1ರಿಂದ ಮಣಿಸಿತು. ಸಾಯ್ ಪರ ಚೇತನ್ ಎಂ. (10ನೇ ನಿ.), ಅಖಿಲ್ ಅಯ್ಯಪ್ಪ (19ನೇ ನಿ.) ಮತ್ತು ರೆಡ್ಡಿ ಕಿರಣ್‌ (55ನೇ ನಿ.) ಗೋಲು ಗಳಿಸಿದರು. ಡಿವೈಇಎಸ್‌ ಬಿ ಪರ ನಿತಿನ್‌ 31ನೇ ನಿಮಿಷದಲ್ಲಿ ಏಕೈಕ ಗೋಲು ಹೊಡೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.