ಡೇವಿಡ್‌ ಕಪ್‌: ಸೆಪ್ಟೆಂಬರ್‌ನಲ್ಲಿ ಭಾರತ– ನಾರ್ವೆ ಸೆಣಸು ನವದೆಹಲಿ: ಭಾರತ ತಂಡ ಡೇವಿಸ್‌ ಕಪ್‌ ಟೆನಿಸ್‌ ವಿಶ್ವಗುಂಪು–1 ಟೂರ್ನಿಯ ಪಂದ್ಯದಲ್ಲಿ ನಾರ್ವೆ ತಂಡವನ್ನು ಎದುರಿಸಲಿದೆ. ‘ಈ ಪಂದ್ಯಕ್ಕೆ ನಾರ್ವೆ ಆತಿಥ್ಯ ವಹಿಸಲಿದ್ದು, ಸೆ.16 ಮತ್ತು 17 ರಂದು ನಡೆಯಲಿದೆ’ ಎಂದು ಅಖಿಲ ಭಾರತ ಟೆನಿಸ್‌ ಸಂಸ್ಥೆ (ಎಐಟಿಎ) ತಿಳಿಸಿದೆ. ‘ಡೇವಿಡ್‌ ಕಪ್‌ ಟೂರ್ನಿಯ ಇತಿಹಾಸದಲ್ಲಿ ಭಾರತ ಮತ್ತು ನಾರ್ವೆ ಇದೇ ಮೊದಲ ಬಾರಿಗೆ ಎದುರಾಗಲಿವೆ. ಆದ್ದರಿಂದ ಎರಡೂ ದೇಶಗಳ ಟೆನಿಸ್‌ ಪ್ರೇಮಿಗಳು ಈ ಪಂದ್ಯವನ್ನು ಕುತೂಹಲದಿಂದ ಎದುರು ನೋಡುತ್ತಿದ್ದಾರೆ’ ಎಂದು ಪ್ರಕಟಣೆಯಲ್ಲಿ ಹೇಳಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.