ಬ್ಯಾಸ್ಕೆಟ್‌ಬಾಲ್‌: ರಾಮಯ್ಯ ತಾಂತ್ರಿಕ ಸಂಸ್ಥೆಗೆ ಪ್ರಶಸ್ತಿ ಬೆಂಗಳೂರು: ರಾಮಯ್ಯ ತಾಂತ್ರಿಕ ಸಂಸ್ಥೆ (ಆರ್‌ಐಟಿ) ಕಾಲೇಜು ತಂಡವು ಪುರುಷರ ರಾಜ್ಯಮಟ್ಟದ ಅಂತರಕಾಲೇಜು ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದೆ. ಇಲ್ಲಿಯ ಸೇಂಟ್‌ ಜೋಸೆಫ್‌ ಕಾಲೇಜು ಮೈದಾನದಲ್ಲಿ ಗುರುವಾರ ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ರಾಮಯ್ಯ ಸಂಸ್ಥೆಯ ತಂಡವು 72–61ರಿಂದ ಆರ್‌ವಿಸಿಇ ತಂಡವನ್ನು ಪರಾಭವಗೊಳಿಸಿತು. ವಿಜೇತ ತಂಡದ ಪರ ಪ್ರದ್ಯುಮ್ನ 20 ಮತ್ತು ರೋಹನ್ 15 ಪಾಯಿಂಟ್ಸ್ ಗಳಿಸಿದರು. ಆರ್‌ಸಿವಿಇ ತಂಡದ ನಕುಲ್‌ 18 ಮತ್ತು ವಿಕಾಸ್‌ 16 ಪಾಯಿಂಟ್ಸ್ ಕಲೆಹಾಕಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.