ವಿಂಡೀಸ್‌ ತಂಡ: ಹೋಲ್ಡರ್‌ಗೆ ಸ್ಥಾನ ಪೋರ್ಟ್‌ ಆಫ್‌ ಸ್ಪೇನ್‌ (ಪಿಟಿಐ): ಭಾರತ ವಿರುದ್ಧದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಗೆ 13 ಸದಸ್ಯರ ವೆಸ್ಟ್‌ ಇಂಡೀಸ್ ತಂಡವನ್ನು ಪ್ರಕಟಿಸಲಾಗಿದ್ದು, ಆಲ್‌ರೌಂಡರ್‌ ಜೇಸನ್‌ ಹೋಲ್ಡರ್‌ ಅವರಿಗೆ ಅವಕಾಶ ನೀಡಲಾಗಿದೆ. ಬಾಂಗ್ಲಾದೇಶ ಎದುರು ತವರಿನಲ್ಲಿ ಇತ್ತೀಚೆಗೆ ನಡೆದ ಸರಣಿಯಲ್ಲಿ ಮಾಜಿ ನಾಯಕನೂ ಆಗಿರುವ ಹೋಲ್ಡರ್‌ ಅವರಿಗೆ ಸ್ಥಾನ ನೀಡಿರಲಿಲ್ಲ. ಆದರೆ ಕ್ರಿಕೆಟ್‌ ವೆಸ್ಟ್‌ ಇಂಡೀಸ್‌ ಆಯ್ಕೆ ಸಮಿತಿ, ಭಾರತ ವಿರುದ್ಧದ ಸರಣಿಗೆ ಅವರನ್ನು ಪರಿಗಣಿಸಿದೆ. ಬಾಂಗ್ಲಾದೇಶದ ಎದುರು ಏಕದಿನ ಸರಣಿಯಲ್ಲಿ 0–3 ರಲ್ಲಿ ಮುಖಭಂಗ ಎದುರಾದರೂ ನಿಕೊಲಸ್‌ ಪೂರನ್‌ ಅವರನ್ನು ನಾಯಕರಾಗಿ ಮುಂದುವರಿಸಲಾಗಿದೆ. ಶಾಯ್‌ ಹೋಪ್‌ಗೆ ಉಪನಾಯಕನ ಜವಾಬ್ದಾರಿ ನೀಡಲಾಗಿದೆ. ಭಾರತ– ವೆಸ್ಟ್‌ಇಂಡೀಸ್‌ ನಡುವಿನ ಮೂರು ಏಕದಿನ ಪಂದ್ಯಗಳು ಕ್ರಮವಾಗಿ ಜುಲೈ 22, 24 ಮತ್ತು 27 ರಂದು ನಡೆಯಲಿವೆ. ವೆಸ್ಟ್‌ ಇಂಡೀಸ್‌ ತಂಡ: ನಿಕೊಲಸ್‌ ಪೂರನ್ (ನಾಯಕ), ಶಾಯ್‌ ಹೋಪ್ (ಉಪನಾಯಕ), ಶಮರ್ ಬ್ರೂಕ್ಸ್, ಕೀಸ್‌ ಕಾರ್ಟಿ, ಜೇಸನ್‌ ಹೋಲ್ಡರ್, ಅಕೀಲ್‌ ಹೊಸೇನ್, ಅಲ್ಜಾರಿ ಜೋಸೆಫ್, ಬ್ರೆಂಡನ್‌ ಕಿಂಗ್, ಕೈಲ್ ಮೇಯರ್ಸ್, ಗುಡಾಕೇಶ್‌ ಮೋತಿ, ಕೀಮೊ ಪೌಲ್, ರೊವ್ಮನ್ ಪೊವೆಲ್, ಜೇಡೆನ್‌ ಸೀಲ್ಸ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.