ನಾನೀಗ ನಿರಾಳ: ಒಲಿಂಪಿಯನ್ ಮೊ ಫರಾ ಲಂಡನ್ (ಎಎಫ್‌ಪಿ): ಒಲಿಂಪಿಯನ್ ಮೊ ಫರಾ ಈಗ ನಿರಾಳರಾಗಿದ್ದಾರೆ. ಬ್ರಿಟಿಷ್ ಸರ್ಕಾರವು ಅವರಿಗೆ ಸಂಪೂರ್ಣವಾಗಿ ಬೆಂಬಲ ನೀಡುವುದಾಗಿ ತಿಳಿಸಿರುವುದೇ ಇದಕ್ಕೆ ಕಾರಣ. ಮಾನವ ಸಾಗಣೆ ಮಾಫಿಯಾವು ತಮ್ಮನ್ನು ಬಾಲ್ಯದಲ್ಲಿ ಯುನೈಟೆಡ್ ಕಿಂಗ್‌ಡಮ್‌ಗೆ ಅಕ್ರಮವಾಗಿ ಕರೆತಂದಿತ್ತು ಎಂದು ಮೊ ಫರಾ ಬಿಬಿಸಿ ವಾಹಿನಿಯ ಸಾಕ್ಷ್ಯ ಚಿತ್ರದಲ್ಲಿ ಹೇಳಿಕೊಂಡಿದ್ದರು. ಇದರಿಂದಾಗಿ ಬ್ರಿಟಿಷ್ ಸರ್ಕಾರವು ಅವರ ನಾಗರಿಕತ್ವವನ್ನು ಮುಂದುವರಿಸುವುದೇ ಎಂಬ ಚರ್ಚೆಗಳು ನಡೆದಿದ್ದವು. ಈ ಕುರಿತು ಪ್ರತಿಕ್ರಿಯಿಸಿರುವ ಪ್ರಧಾನಿಗಳ ವಕ್ತಾರ, ‘ಮೊ ಫರಾ ಕ್ರೀಡಾ ತಾರೆ. ಅವರು ದೇಶದ ಹಲವಾರು ಜನರಿಗೆ ಸ್ಪೂರ್ತಿಯಾಗಿದ್ದಾರೆ. ಈ ರೀತಿ ಮಾಫಿಯಾಗಳಿಂದ ಮಾನವ ಕಳ್ಳಸಾಗಣೆಯಲ್ಲಿ ಸಿಲುಕಿಕೊಂಡವರು ಬಹಳಷ್ಷು ಯಾತನೆಗಳನ್ನು ಅನುಭವಿಸುತ್ತಾರೆ. ಇಂತಹ ಕ್ರೂರ ಮಾಫಿಯಾಗಳನ್ನು ಮಟ್ಟ ಹಾಕಲು ನಮ್ಮ ಸರ್ಕಾರ ಕಟಿಬದ್ಧವಾಗಿದೆ’ ಎಂದಿದ್ದಾರೆ. ‘ನಾನೀಗ ನಿರಾಳನಾಗಿದ್ದೇನೆ. ಬ್ರಿಟನ್ ಸರ್ಕಾರವು ನನಗೆ ತೋರಿರುವ ಗೌರವ ಮತ್ತು ನೀಡಿರುವ ಅವಕಾಶಕ್ಕೆ ಚಿರಋಣಿಯಾಗಿರುವೆ’ ಎಂದು ಫರಾ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.