ಕಾಮನ್‌ವೆಲ್ತ್‌ ಕೂಟ: ಸ್ಕ್ವಾಷ್ ತಂಡದಲ್ಲಿ ಅನಾಹತ್‌ಗೆ ಸ್ಥಾನ ನವದೆಹಲಿ (ಪಿಟಿಐ): ದೆಹಲಿಯ 14 ವರ್ಷದ ಆಟಗಾರ್ತಿ ಅನಾಹತ್‌ ಸಿಂಗ್‌ ಅವರು ಬರ್ಮಿಂಗ್‌ಹ್ಯಾಂನಲ್ಲಿ ನಡೆಯಲಿರುವ ಕಾಮನ್‌ವೆಲ್ತ್‌ ಕೂಟಕ್ಕೆ ಭಾರತ ಸ್ಕ್ವಾಷ್‌ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. 15 ವರ್ಷದೊಳಗಿನ ವಿಭಾಗದಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಅನಾಹತ್‌, ಜರ್ಮನಿಯಲ್ಲಿ ಇತ್ತೀಚೆಗೆ ನಡೆದ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದರು. ಕಳೆದ ತಿಂಗಳು ನಡೆದ ಏಷ್ಯನ್‌ ಚಾಂಪಿಯನ್‌ಷಿಪ್‌ನ ಜೂನಿಯರ್‌ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ್ದರು. ಅನಾಹತ್‌ ಅಲ್ಲದೆ, ವೇಲಾವನ್‌ ಸೆಂಥಿಲ್‌ಕುಮಾರ್‌ ಮತ್ತು ಅಭಯ್‌ ಸಿಂಗ್‌ ಅವರು ಇದೇ ಮೊದಲ ಬಾರಿ ಕಾಮನ್‌ವೆಲ್ತ್‌ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಸೌರವ್‌ ಘೋಷಲ್, ಜೋಷ್ನಾ ಚಿಣ್ಣಪ್ಪ ಮತ್ತು ದೀಪಿಕಾ ಪಳ್ಳಿಕಲ್ ಅವರು ಸ್ಕ್ವಾಷ್‌ನಲ್ಲಿ ಭಾರತದ ಪದಕದ ಭರವಸೆ ಎನಿಸಿಕೊಂಡಿದ್ದಾರೆ. ತಂಡ ಹೀಗಿದೆ: ಪುರುಷರ ಸಿಂಗಲ್ಸ್: ಸೌರವ್‌ ಘೋಷಲ್, ರಮಿತ್ ಟಂಡನ್, ಅಭಯ್‌ ಸಿಂಗ್ ಮಹಿಳೆಯರ ಸಿಂಗಲ್ಸ್: ಜೋಷ್ನಾ ಚಿಣ್ಣಪ್ಪ, ಸುನಯನ ಕುರುವಿಲ, ಅನಾಹತ್‌ ಸಿಂಗ್ ಮಹಿಳೆಯರ ಡಬಲ್ಸ್: ದೀಪಿಕಾ ಪಳ್ಳಿಕಲ್/ ಜೋಷ್ನಾ ಮಿಶ್ರ ಡಬಲ್ಸ್‌: ಸೌರವ್‌– ದೀಪಿಕಾ, ರಮಿತ್–ಜೋಷ್ನಾ ಪುರುಷರ ಡಬಲ್ಸ್: ರಮಿತ್–ಹರಿಂದರ್‌ ಪಾಲ್‌ ಸಿಂಗ್‌ ಸಂಧು, ವೇಲಾವನ್‌ ಸೆಂಥಿಲ್‌ಕುಮಾರ್– ಅಭಯ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.