ಮಹಿಳಾ ಪ‍್ರೊ ಗಾಲ್ಫ್: ಪ್ರಣವಿ ಅರಸ್ ಮುನ್ನಡೆ ಬೆಂಗಳೂರು: ಮೈಸೂರಿನ ಪ್ರಣವಿ ಅರಸ್ ಅವರು ಇಲ್ಲಿ ನಡೆಯುತ್ತಿರುವ ಮಹಿಳಾ ಪ‍್ರೊ ಗಾಲ್ಫ್ ಟೂರ್‌ನ ಒಂಬತ್ತನೇ ಲೆಗ್ ಟೂರ್ನಿಯಲ್ಲಿ ಮೊದಲ ಸುತ್ತಿನ ಬಳಿಕ ಮುನ್ನಡೆ ಕಾಯ್ದುಕೊಂಡಿದ್ದಾರೆ. ಈ ವರ್ಷದಲ್ಲಿ ಮೂರು ಪ್ರಶಸ್ತಿ ಜಯಿಸಿರುವ 19 ವರ್ಷದ ಪ್ರಣವಿ, ಸೆಹೆರ್ ಅತ್ವಾಲ್ ಅವರನ್ನು ಹಿಂದಿಕ್ಕಿದ್ದರು.ಮಹಿಳಾ ಪ‍್ರೊ ಗಾಲ್ಫ್ ಟೂರ್‌ನಲ್ಲಿ ಒಂದು ಬಾರಿ ಪ್ರಶಸ್ತಿ ಗೆದ್ದಿರುವ ಗೌರಿ ಕರಾಡೆ ಮೂರನೇ ಮತ್ತು ಸ್ನೇಹಾ ಸಿಂಗ್ ನಾಲ್ಕನೇ ಸ್ಥಾನದಲ್ಲಿದ್ದರು. ಮೊದಲ ಸುತ್ತಿನ ಬಳಿಕ ವಿಧಾತ್ರಿ ಅರಸ್‌, ಹಿತಾಶ್ರೀ ಬಕ್ಷಿ, ಅನೀಶಾ ಅಗರವಾಲ್‌ ಮತ್ತು ಶ್ವೇತಾ ಮಾನಸಿಂಗ್‌ ಜಂಟಿ ಐದನೇ ಸ್ಥಾನದಲ್ಲಿದ್ದರು. ಖುಷಿ ಖನಿಜಾವು, ಅಫ್ಸನ್ ಫಾತಿಮಾ, ದಿಶಾ ಕಾವೇರಿ ಮತ್ತು ಅನನ್ಯಾ ದಾತಾರ್‌ ಜಂಟಿ ಒಂಬತ್ತನೇ ಸ್ಥಾನದಲ್ಲಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.