ಚೆಸ್‌: ಗಂಗಾಸ್‌ಗೆ ಮೊದಲ ಸೋಲು ದುಬೈ: ಸತತ ಮೂರು ಗೆಲುವುಗಳನ್ನು ಪಡೆದಿದ್ದ ಗಂಗಾಸ್‌ ಗ್ರ್ಯಾಂಡ್‌ಮಾಸ್ಟರ್ಸ್‌ ತಂಡ, ಗ್ಲೋಬಲ್‌ ಚೆಸ್‌ ಲೀಗ್‌ನಲ್ಲಿ ಭಾನುವಾರ ಮುಂಬಾ ಮಾಸ್ಟರ್ಸ್‌ ಎದುರು ಪರಾಭವಗೊಂಡಿತು. ವಿಶ್ವನಾಥನ್‌ ಆನಂದ್‌ ಅವರು ಮ್ಯಾಕ್ಸಿಮ್‌ ಲಾಗ್ರೇವ್‌ ಎದುರು ಗೆದ್ದರೂ, ತಂಡದ ಇತರ ಸ್ಪರ್ಧಿಗಳು ನಿರಾಸೆ ಅನುಭವಿಸಿದರು. ಡಿ.ಹರಿಕಾ ಅವರು ಬೆಲಾ ಕೊಟೆನಶ್ವಿಲಿ ವಿರುದ್ಧ ಜಯಿಸಿ ಮುಂಬಾಗೆ ಉತ್ತಮ ಆರಂಭ ನೀಡಲು ಯಶಸ್ವಿಯಾದರು. ದಿನದ ಮತ್ತೊಂದು ಪಂದ್ಯದಲ್ಲಿ ಎಸ್‌ಜಿ ಅಲ್ಪೈನ್ ವಾರಿಯರ್ಸ್ 11–6 ರಲ್ಲಿ ಚಿಂಗಾರಿ ಗಲ್ಫ್‌ ಟೈಟನ್ಸ್‌ ತಂಡವನ್ನು ಮಣಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.