: ಅಲೆಕ್ಸ್‌ ಯೀ ಗೆ ಮೊದಲ ಚಿನ್ನ ಬರ್ಮಿಂಗ್‌ಹ್ಯಾಮ್‌: ಇಂಗ್ಲೆಂಡ್‌ನ ಅಲೆಕ್ಸ್‌ ಯೀ ಅವರು ಈ ಬಾರಿಯ ಕಾಮನ್‌ವೆಲ್ತ್‌ ಕೂಟದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಕ್ರೀಡಾಪಟು ಎಂಬ ಗೌರವ ತಮ್ಮದಾಗಿಸಿಕೊಂಡರು. ಗುರುವಾರ ನಡೆದ ಪುರುಷರ ಟ್ರಯಥ್ಲಾನ್‌ ಸ್ಪರ್ಧೆಯನ್ನು ಗೆದ್ದು ಅವರು ಈ ಸಾಧನೆ ಮಾಡಿದರು. ಟ್ರಯಥ್ಲಾನ್‌ನ ಮೂರು ಸ್ಪರ್ಧೆಗಳನ್ನು (750 ಮೀ. ಈಜು, 20 ಕಿ.ಮೀ. ಸೈಕ್ಲಿಂಗ್‌ ಮತ್ತು 5 ಕಿ.ಮೀ ಓಟ) 50 ನಿಮಿಷ 34 ಸೆ.ಗಳಲ್ಲಿ ಕ್ರಮಿಸಿ ಮೊದಲ ಸ್ಥಾನ ಪಡೆದರು. ನ್ಯೂಜಿಲೆಂಡ್‌ನ ಹೇಡನ್‌ ವಿಲ್ಡ್‌ (50 ನಿ. 47 ಸೆ.) ಬೆಳ್ಳಿ ಗೆದ್ದರೆ, ಆಸ್ಟ್ರೇಲಿಯಾದ ಮ್ಯಾಥ್ಯು ಹೌಸೆರ್‌ (50 ನಿ. 50 ಸೆ.) ಕಂಚು ಪಡೆದರು. ಈಜು ಮತ್ತು ಸೈಕ್ಲಿಂಗ್‌ ಸ್ಪರ್ಧೆಗಳ ಬಳಿಕ ವಿಲ್ಡ್‌ ಮೊದಲ ಸ್ಥಾನದಲ್ಲಿದ್ದರೆ, ಯೀ ಎರಡನೇ ಸ್ಥಾನದಲ್ಲಿದ್ದರು. ಆದರೆ ಓಟದಲ್ಲಿ ಉತ್ತಮ ಸಾಮರ್ಥ್ಯ ತೋರಿದ ಇಂಗ್ಲೆಂಡ್‌ನ ಕ್ರೀಡಾಪಟು ಚಿನ್ನಕ್ಕೆ ಕೊರಳೊಡ್ಡಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.