ಬಾಕ್ಸಿಂಗ್‌: ಪ್ರೀ ಕ್ವಾರ್ಟರ್‌ಗೆ ಶಿವ ಥಾಪಾ ಬರ್ಮಿಂಗ್‌ಹ್ಯಾಮ್‌: ಭಾರತದ ಬಾಕ್ಸರ್‌ ಶಿವ ಥಾಪಾ ಅವರು ಪದಕದೆಡೆಗಿನ ಅಭಿಯಾನವನ್ನು ಭರ್ಜರಿಯಾಗಿಯೇ ಆರಂಭಿಸಿದ್ದು, ಪುರುಷರ 63.5 ಕೆ.ಜಿ. ವಿಭಾಗದಲ್ಲಿ ಪ್ರೀ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ್ದಾರೆ. ಶುಕ್ರವಾರ ನಡೆದ ಮೊದಲ ಸುತ್ತಿನಲ್ಲಿ ಅವರು 5–0 ರಲ್ಲಿ ಪಾಕಿಸ್ತಾನದ ಸುಲೆಮಾನ್‌ ಬಲೋಚ್‌ ವಿರುದ್ಧ ಗೆದ್ದರು. ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಐದು ಬಾರಿ ಚಿನ್ನ ಗೆದ್ದಿರುವ ಶಿವ, ಮೇಲಿಂದ ಮೇಲೆ ಬಲವಾದ ಪಂಚ್‌ಗಳನ್ನು ನೀಡಿ ಎದುರಾಳಿಯನ್ನು ಕಂಗೆಡಿಸಿದರು. ಆಕ್ರಮಣದ ಜತೆ ರಕ್ಷಣೆಯಲ್ಲೂ ಚಾಕಚಕ್ಯತೆ ಮೆರೆದ ಭಾರತದ ಬಾಕ್ಸರ್‌, ರಿಂಗ್‌ನಲ್ಲಿ ಸಲೀಸಾಗಿ ಅತ್ತಿತ್ತ ಚಲಿಸಿ ಎದುರಾಳಿಗೆ ಪಂಚ್‌ ನೀಡಲು ಅವಕಾಶವನ್ನೇ ಕೊಡದೆ ಸುಲಭ ಜಯ ಪಡೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.