ಬ್ಯಾಡ್ಮಿಂಟನ್: ಭಾರತಕ್ಕೆ ಮಣಿದ ಪಾಕಿಸ್ತಾನ ಬರ್ಮಿಂಗ್‌ಹ್ಯಾಮ್: ಭಾರತ ಬ್ಯಾಡ್ಮಿಂಟನ್ ತಂಡವು ಕಾಮನ್‌ವೆಲ್ತ್ ಕೂಟದಲ್ಲಿ ಶುಕ್ರವಾರ ಶುಭಾರಂಭ ಮಾಡಿತು. ಭಾರತ ತಂಡವು 3–0ಯಿಂದ ಪಾಕಿಸ್ತಾನ ವಿರುದ್ಧ ಸುಲಭವಾಗಿ ಜಯಿಸಿತು. ಮಿಶ್ರ ಡಬಲ್ಸ್‌ನಲ್ಲಿ ಬಿ. ಸುಮಿತ್ ರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿಯು 21–9, 21–12ರಿಂದ ಪಾಕ್ ತಂಡದ ಮೊಹಮ್ಮದ್ ಇರ್ಫಾನ್ ಸಯೀದ್ ಭಟ್ಟಿ ಮತ್ತು ಘಜಾಲಾ ಸಿದ್ಧಿಕಿ ವಿರುದ್ಧ ಜಯಿಸಿತು. ಸಿಂಗಲ್ಸ್‌ನಲ್ಲಿ ಕೆ. ಶ್ರೀಕಾಂತ್ ತಮ್ಮ ಪಾರಮ್ಯ ಮೆರೆದರು. 21–7, 21–12ರಿಂದ ಮುರಾದ್ ಅಲಿ ವಿರುದ್ಧ ಗೆದ್ದರು. ಮಹಿಳೆಯರ ಸಿಂಗಲ್ಸ್‌ನಲ್ಲಿ ಒಲಿಂಪಿಯನ್ ಪಿ.ವಿ. ಸಿಂಧು 21–7, 21–6ರಿಂದ ಪಾಕ್‌ ತಂಡದ ಮಹೂರ್ ಶಹಜಾದ್ ವಿರುದ್ಧ ಪಾರಮ್ಯ ಮೆರೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.