ಈಜು: ಅದ್ವೈತ್‌ಗೆ 7ನೇ ಸ್ಥಾನ ಬರ್ಮಿಂಗ್‌ಹ್ಯಾಮ್: ಭಾರತದ ಅದ್ವೈತ್‌ ಪಾಗೆ ಮತ್ತು ಕುಶಾಗ್ರ ರಾವತ್‌ ಅವರು ಪುರುಷರ ಈಜು ಸ್ಪರ್ಧೆಯ 1,500 ಮೀ. ಫ್ರೀಸ್ಟೈಲ್‌ನಲ್ಲಿ ಕ್ರಮವಾಗಿ 7 ಹಾಗೂ 8ನೇ ಸ್ಥಾನ ಗಳಿಸಿದರು. ಪಾಗೆ ಅವರು 15 ನಿ. 32.36 ಸೆ.ಗಳಲ್ಲಿ ಗುರಿ ತಲುಪಿದರೆ, ರಾವತ್‌ 15 ನಿ. 42.67 ಸೆ.ಗಳನ್ನು ತೆಗೆದುಕೊಂಡರು. ಫೈನಲ್‌ನಲ್ಲಿ ಒಟ್ಟು 8 ಸ್ಪರ್ಧಿಗಳು ಕಣದಲ್ಲಿದ್ದರು. ಇದರೊಂದಿಗೆ ಕಾಮನ್‌ವೆಲ್ತ್‌ ಕೂಟದ ಈಜು ಸ್ಪರ್ಧೆಯಲ್ಲಿ ಭಾರತದ ಸವಾಲು ಕೊನೆಗೊಂಡಿದೆ. ಶ್ರೀಹರಿ ನಟರಾಜ್‌ ಅವರು ಪುರುಷರ 50 ಮೀ. ಬ್ಯಾಕ್‌ಸ್ಟ್ರೋಕ್‌ ಐದನೇ ಸ್ಥಾನ ಪಡೆದುಕೊಂಡದ್ದು ಭಾರತದ ಪರ ಅತ್ಯುತ್ತಮ ಸಾಧನೆ ಎನಿಸಿಕೊಂಡಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.