ಸ್ಕ್ವಾಷ್‌: ಕ್ವಾರ್ಟರ್‌ಫೈನಲ್‌ಗೆ ಸೌರವ್‌, ಸುನೈನಾ ಮುನ್ನಡೆ ಬರ್ಮಿಂಗ್‌ಹ್ಯಾಮ್‌: ಭಾರತದ ಸ್ಕ್ವಾಷ್‌ ಆಟಗಾರ ಸೌರವ್ ಘೋಷಾಲ್ ಅವರು ಕ್ರೀಡಾಕೂಟದ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ. ಭಾನುವಾರ ರಾತ್ರಿ ನಡೆದ ಪ್ರೀಕ್ವಾರ್ಟರ್‌ ಹಣಾಹಣಿಯಲ್ಲಿ, ವಿಶ್ವ ರ‍್ಯಾಂಕಿಂಗ್‌ನಲ್ಲಿ 15ನೇ ಸ್ಥಾನದಲ್ಲಿರುವ ಸೌರವ್‌11-6, 11-2, 11-6ರಿಂದ ಕೆನಡಾದ ಡೇವಿಡ್‌ ಬೈಲಾರ್ಜಿಯನ್ ಅವರನ್ನು ಪರಾಭವಗೊಳಿಸಿದರು. 62ನೇ ರ‍್ಯಾಂಕಿನ ಕೆನಡಾ ಆಟಗಾರನ ಎದುರು ಸೌರವ್ ಆರಂಭದಲ್ಲಿ ಪರದಾಡಿದರೂ ಬಳಿಕ ಪಾರಮ್ಯ ಮೆರೆದರು. ಕಾಮನ್‌ವೆಲ್ತ್ ಕ್ರೀಡಾಕೂಟದ ಸ್ಕ್ವಾಷ್‌ನಲ್ಲಿ ಭಾರತ ಚೊಚ್ಚಲ ಪದಕದ ನಿರೀಕ್ಷೆಯಲ್ಲಿದೆ. ಮಹಿಳಾ ಸಿಂಗಲ್ಸ್‌ನಲ್ಲಿ ಜೋಷ್ನಾ ಚಿಣ್ಣಪ್ಪಕೂಡ ಎಂಟರಘಟ್ಟ ತಲು‍ಪಿದ್ದಾರೆ. ಪ್ಲೇಟ್‌ ಸೆಮಿಫೈನಲ್‌ಗೆ ಸುನೈನಾ: ಮಹಿಳಾ ಸಿಂಗಲ್ಸ್‌ನ ಪ್ಲೇಟ್‌ ವಿಭಾಗದಲ್ಲಿ ಭಾರತದ ಸುನೈನಾ ಕುರುವಿಲ್ಲಾ ಅವರೂ ನಾಲ್ಕರ ಘಟ್ಟ ತಲುಪಿದರು. ಸೋಮವಾರ ನಡೆದ ಎಂಟರಘಟ್ಟದ ಪಂದ್ಯದಲ್ಲಿ ಅವರು11-3, 11-2, 11-2ರಿಂದ ಶ್ರೀಲಂಕಾದ ಚನಿತ್ಮಾ ಸಿನಲಿ ಅವರನ್ನು ಪರಾಭವಗೊಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.