ಅಥ್ಲೆಟಿಕ್ಸ್: ಜ್ಯೋತಿ ಯರಾಜಿಗೆ ಚಿನ್ನ ನವದೆಹಲಿ: ರಾಷ್ಟ್ರೀಯ ದಾಖಲೆ ಹೊಂದಿರುವ ಭಾರತದ ಜ್ಯೋತಿ ಯರಾಜಿ ಅವರು ಜರ್ಮನಿಯ ವೆನೆಮ್‌ನಲ್ಲಿ ನಡೆದ ‘ಕುರ್ಫಾಲ್ಜ್‌ ಗಲಾ‘ ಅಥ್ಲೆಟಿಕ್ಸ್ ಟೂರ್ನಿಯ 100 ಮೀಟರ್ಸ್ ಹರ್ಡಲ್ಸ್‌ನಲ್ಲಿ ಭಾನುವಾರ ಚಿನ್ನದ ಪದಕ ಜಯಿಸಿದರು. ಜ್ಯೋತಿ ಅವರು ಸ್ಪರ್ಧೆಯನ್ನು 12.84 ಸೆಕೆಂಡುಗಳಲ್ಲಿ ಕೊನೆಗೊಳಿಸಿದರು. ಇದರೊಂದಿಗೆ ವೈಯಕ್ತಿಕ ಎರಡನೇ ಶ್ರೇಷ್ಠ ಸಾಧನೆ ದಾಖಲಿಸಿದರು. ಕಳೆದ ವರ್ಷ 12.82 ಸೆಕೆಂಡುಗಳಲ್ಲಿ ಗುರಿ ತಲುಪಿದ್ದು ಅವರ ರಾಷ್ಟ್ರೀಯ ದಾಖಲೆಯಾಗಿದೆ. ಪುರುಷರ 200 ಮೀ. ಓಟದಲ್ಲಿ ಭಾರತದ ಅಮ್ಲಾನ್ ಬೊರ್ಗೊಹೈನ್ (20.66 ಸೆ.) ಶನಿವಾರ ಚಿನ್ನದ ಪದಕ ಜಯಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.