2022 | ಬ್ಯಾಡ್ಮಿಂಟನ್‌: ಎಂಟರಘಟ್ಟಕ್ಕೆ ಸಿಂಧು, ಶ್ರೀಕಾಂತ್‌ ಲಗ್ಗೆ ಬರ್ಮಿಂಗ್‌ಹ್ಯಾಮ್‌: ಭಾರತದ ಪಿ.ವಿ.ಸಿಂಧು ಮತ್ತು ಕಿದಂಬಿ ಶ್ರೀಕಾಂತ್‌ ಅವರು ಕ್ರೀಡಾಕೂಟದ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗಗಳಲ್ಲಿ ಕ್ವಾ‌ರ್ಟರ್‌ಫೈನಲ್ ತಲುಪಿದ್ದಾರೆ. ಎನ್‌ಇಸಿ ಹಾಲ್‌ನಲ್ಲಿ ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್ ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಸಿಂಧು 21–10, 21–9ರಿಂದ ಉಗಾಂಡದ ಹುಸಿನಾ ಕೋಬುಗಬೆ ಅವರನ್ನು ಪರಾಭವಗೊಳಿಸಿದರು. ಈ ಪಂದ್ಯದಲ್ಲಿ ಸಿಂಧು ಸಂಪೂರ್ಣ ಪಾರಮ್ಯ ಮೆರೆದರು. ಪುರುಷರ ವಿಭಾಗದಲ್ಲಿ ಶ್ರೀಕಾಂತ್ 21–9, 21–12ರಿಂದ ಶ್ರೀಲಂಕಾದ ದುಮಿಂದು ಅಭಯವಿಕ್ರಮ ಎದುರು ಗೆದ್ದರು. ಮಹಿಳೆಯರ ಡಬಲ್ಸ್‌ನಲ್ಲಿ ತ್ರೀಶಾ ಜೋಲಿ– ಗಾಯತ್ರಿ ಗೋಪಿಚಂದ್‌ 21–2, 21–4ರಿಂದ ಮಾರಿಷಸ್‌ನ ಲೆಂಗ್ ಫೊರ್ ಸ್ಯಾಂಗ್ ಜೆಮಿಮಾ– ಮುಂಗ್ರಾ ಗಣೇಶ ಎದುರು ಜಯಿಸಿ ಎಂಟರಘಟ್ಟ ತಲುಪಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.