2022 | ಟಿಟಿ: ಶರತ್–ಸತ್ಯನ್‌ಗೆ ಬೆಳ್ಳಿ ಬರ್ಮಿಂಗ್‌ಹ್ಯಾಮ್ (ಪಿಟಿಐ): ಭಾರತದ ಅಚಂತಾ ಶರತ್‌ ಕಮಲ್‌ ಮತ್ತು ಜಿ.ಸತ್ಯನ್‌ ಅವರು ಟೇಬಲ್‌ ಟೆನಿಸ್‌ ಟೂರ್ನಿಯ ಪುರುಷರ ಡಬಲ್ಸ್‌ ವಿಭಾಗದಲ್ಲಿ ಬೆಳ್ಳಿ ಜಯಿಸಿದರು. ಭಾನುವಾರ ನಡೆದ ಫೈನಲ್‌ನಲ್ಲಿ ಭಾರತದ ಜೋಡಿ 11-8, 8-11, 3-11, 11-7, 4-11 ರಲ್ಲಿ ಇಂಗ್ಲೆಂಡ್‌ನ ಪಾಲ್‌ ಡ್ರಿಂಕ್‌ಹಾಲ್‌– ಲಿಯಾಮ್ ಪಿಚ್‌ಫೋರ್ಡ್‌ ಎದುರು ಸೋತರು. 2018ರ ಗೋಲ್ಡ್‌ಕೋಸ್ಟ್‌ ಕೂಟದ ಫೈನಲ್‌ನಲ್ಲೂ ಭಾರತದ ಜೋಡಿ ಇದೇ ಎದುರಾಳಿಗಳ ಎದುರು ಸೋತು ಬೆಳ್ಳಿ ಪಡೆದು ಕೊಂಡಿತ್ತು. ಶ್ರೀಜಾಗೆ ನಿರಾಸೆ: ಶ್ರೀಜಾ ಅಕುಲಾ ಅವರು ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಕಂಚು ಗೆಲ್ಲುವ ಅವಕಾಶವನ್ನು ಅಲ್ಪದರಲ್ಲೇ ಕಳೆದು ಕೊಂಡರು. ಮೂರನೇ ಸ್ಥಾನ ನಿರ್ಣಯಿಸಲು ನಡೆದ ಪಂದ್ಯದಲ್ಲಿ 3–4 ರಲ್ಲಿ ಆಸ್ಟ್ರೇಲಿಯಾದ ಯಾಂಗ್‌ ಜಿ ಲಿಯು ಎದುರು ಸೋತರು. ಎದುರಾಳಿಗೆ ಪ್ರಬಲ ಪೈಪೋಟಿ ನೀಡಿದ ಭಾರತದ ಆಟಗಾರ್ತಿ ಅಂತಿಮವಾಗಿ 11-3, 6-11, 2-11, 11-7, 13-15, 11-9, 7-11 ರಲ್ಲಿ ಪರಾಭವಗೊಂಡರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.