ಇಂಡಿಪೆಂಡೆನ್ಸ್ ಚಾಲೆಂಜ್‌ ಚೆಸ್‌ ಟೂರ್ನಿ: ಅನ್ವಿತ್‌, ಆದಿತ್ಯಗೆ ಪ್ರಶಸ್ತಿ ಬೆಂಗಳೂರು: ಅನ್ವಿತ್ ಪಿ. ಭಟ್ ಹಾಗೂ ಆದಿತ್ಯ ಟ್ರೆಹಾನ್ ಅವರು ಚಾಂಪಿಯನ್ಸ್ ಚೆಸ್ ಅಕಾಡೆಮಿ ಆಯೋಜಿಸಿದ್ದ ಇಂಡಿಪೆಂಡೆನ್ಸ್ ಚಾಲೆಂಜ್‌ ಚೆಸ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದರು. ಭಾನುವಾರ ನಡೆದ ಟೂರ್ನಿಯ 10 ವರ್ಷದೊಳಗಿನವರ ವಿಭಾಗದ ಐದು ಸುತ್ತುಗಳಲ್ಲಿ ಐದು ಪಾಯಿಂಟ್ಸ್ ಕಲೆಹಾಕಿದ ಅನ್ವಿತ್ ಅಗ್ರಸ್ಥಾನ ಗಳಿಸಿದರು. ಅವನಿ (4 ಪಾಯಿಂಟ್ಸ್) ಹಾಗೂ ಆರ್ಯನ್‌ ಯತೀಶ್ (4) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದರು. 16 ವರ್ಷದೊಳಗಿನವರ ವಿಭಾಗದಲ್ಲಿ ಆದಿತ್ಯ ಚಾಂಪಿಯನ್ ಆದರು. ಆದಿತ್ಯ ಎಲ್ಲ ಐದು ಪಾಯಿಂಟ್ಸ್ ಗಳಿಸಿದರು. ತರುಣ್‌ ಪಿ.ಎಂ. (4) ಮತ್ತು ಶ್ರೀವರ್ಧನ್‌ (3) ಎರಡು ಮತ್ತು ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.