ಟೇಬಲ್ ಟೆನಿಸ್‌: ಯಶಸ್ವಿನಿಗೆ ಕಂಚು ಬೆಂಗಳೂರು: ಕರ್ನಾಟಕದ ಯಶಸ್ವಿನಿ ಘೋರ್ಪಡೆ ಅವರು ಸ್ವೀಡನ್‌ನಲ್ಲಿ ನಡೆದ ಡಬ್ಲ್ಯುಟಿಟಿ ಯೂತ್ ಕಂಟೆಂಡರ್‌ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕಂಚಿನ ಪದಕ ಜಯಿಸಿದ್ದಾರೆ. ಭಾನುವಾರ ನಡೆದ 19 ವರ್ಷದೊಳಗಿನವರ ವಿಭಾಗದ ಸೆಮಿಫೈನಲ್‌ನಲ್ಲಿ ಯಶಸ್ವಿನಿ 11–9, 7–11, 9–11, 4–11ರಿಂದ ದಕ್ಷಿಣ ಕೊರಿಯಾದ ಕಿಮ್‌ ಸಿಯೊಂಗ್ ಜಿನ್ ಎದುರು ಸೋತರು. ಮೊದಲ ಗೇಮ್‌ ಗೆದ್ದ ಅವರು ಬಳಿಕದ ಮೂರು ಗೇಮ್‌ಗಳಲ್ಲಿ ನಿರಾಸೆ ಅನುಭವಿಸಿದರು. ಇದಕ್ಕೂ ಮೊದಲು ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಯಶಸ್ವಿನಿ11-7,10-12,15-13,11-6ರಿಂದ ಭಾರತದದವರೇ ಆದ ಪ್ರಿತಾ ಪ್ರಿಯಾ ಎದುರು ಗೆದ್ದಿದ್ದರು. ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ8-11,11-8,13-11,13-11ರಿಂದ ಚೀನಾ ತೈಪೆಯ ಹುವಾಂಗ್‌ ಯು ಜಿ ಎದುರು ಜಯಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.