ಕೊಕ್ಕೊ: ಪ್ಲೇ ಆಫ್‌ಗೆ ಚೆನ್ನೈ ಕ್ವಿಕ್ ಗನ್ಸ್ ಪುಣೆ: ರಾಮ್‌ಜೀ ಕಶ್ಯಪ್ ಅವರ ಆಲ್‌ರೌಂಡ್‌ ಆಟ ಮತ್ತು ಪಿ. ನರಸಯ್ಯ ಅವರ ಉತ್ತಮ ದಾಳಿಯ ಬಲದಿಂದ ಚೆನ್ನೈ ಕ್ವಿಕ್ ಗನ್ಸ್ ತಂಡವು ಅಲ್ಟಿಮೇಟ್‌ ಕೊಕ್ಕೊ ಲೀಗ್‌ನ ಪ್ಲೇ ಆಫ್‌ ತಲುಪಿತು. ಸೋಮವಾರ ಇಲ್ಲಿ ನಡೆದ ಪಂದ್ಯದಲ್ಲಿ 58–42ರಿಂದ ಮುಂಬೈ ಖಿಲಾಡೀಸ್ ತಂಡವನ್ನು ಸೋಲಿಸಿತು. ಕಶ್ಯಪ್‌ ಆರು ನಿಮಿಷ 37 ಸೆಕೆಂಡುಗಳ ಕಾಲ ಔಟಾಗಲಿಲ್ಲ. ಅಲ್ಲದೆ 11 ಪಾಯಿಂಟ್ಸ್ ಕೂಡ ಗಳಿಸಿದರು. ನರಸಯ್ಯ 14 ಪಾಯಿಂಟ್ಸ್ ಕಲೆಹಾಕಿದರು. ಇನ್ನೊಂದು ಪಂದ್ಯದಲ್ಲಿ ತೆಲುಗು ಯೋಧಾಸ್‌ 88–21ರಿಂದ ಗುಜರಾತ್ ಜೈಂಟ್ಸ್ ಎದುರು ಗೆದ್ದಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.