ಈಕ್ವೆಸ್ಟ್ರಿಯನ್‌ ಪ್ರೀಮಿಯರ್ ಲೀಗ್‌: ಬಾಲಾಜಿ ಶಂಕರ್‌ಗೆ ಅಗ್ರಸ್ಥಾನ ಬೆಂಗಳೂರು: ಡಿಇಸಿ ತಂಡದ ಬಾಲಾಜಿ ವಿ. ಶಂಕರ್ ಅವರು ಈಕ್ವೆಸ್ಟ್ರಿಯನ್ ಪ್ರೀಮಿಯರ್ ಲೀಗ್‌ನ 130 ಸೆ.ಮೀ. ಶೋ ಜಂಪಿಂಗ್‌ನಲ್ಲಿ ಅಗ್ರಸ್ಥಾನ ಗಳಿಸಿದರು. ಭಾನುವಾರ ನಡೆದ ಲೀಗ್‌ನಲ್ಲಿ ಲೂಟ್ರಿಲ್ಲೊ ಎಲ್‌ವಿ ಅಶ್ವವನ್ನು ಸವಾರಿ ಮಾಡಿದ ಅವರು, ಕೇಖ್ರಿ ರಿಯೊ (ಲಿಯೊನಾರ್ಡೊ ಅಶ್ವ, ಯುಆರ್‌ಬಿ ತಂಡ) ಅವರನ್ನು ಹಿಂದಿಕ್ಕಿದರು. ಚೇತನ್‌ರೆಡ್ಡಿ (ಸ್ಯಾಂಡ್ರಾ ಬ್ಲ್ಯೂ, ಇಂಡಿಯನ್‌) ಮೂರನೇ ಸ್ಥಾನ ಗಳಿಸಿದರು. ಇನ್ನುಳಿದ ಫಲಿತಾಂಶಗಳು: 120–125 ಸೆ.ಮೀ. ಶೋ ಜಂಪಿಂಗ್‌: ತಿಯಾಶಾ ವತುಲ್‌ (ಡೆಮಾಕ್ರಾಟಿಕ್‌, ಯುಆರ್‌ಬಿ)–1, ತನ್ಮಯ್ ವಾಂಡ್ರೆ (ವೊಲ್‌ಬೀಟ್‌, ಯುಆರ್‌ಬಿ)–2, ಸಂಯೋಗಿತಾ ಲಿಮಯೆ (ಅಬ್ರಕಡಬ್ರ, ಇಐಆರ್‌ಎಸ್‌). 115 ಸೆ.ಮೀ. ಶೋ ಜಂಪಿಂಗ್‌: ಭರತ್‌ ಮನೋಹರನ್‌ (ಬ್ಯಾಂಗಿ, ಇಸಿಇ)–1, ಅನಿಕಾ ಧುಲರ್‌ (ಚಾಪ್‌ಸ್ಟಿಕ್‌, ಎಫ್‌ಎಸ್‌ಎಸ್‌)–2, ಶ್ಲೋಕ್ ಜುಂಜುನ್‌ವಾಲಾ (ಹಲ್‌ಚಲ್‌, ಎಆರ್‌ಸಿ)–3. 110 ಸೆ.ಮೀ.ಶೋ ಜಂಪಿಂಗ್‌: ಹರ್ಷ ದಗ್ಗುಬಾಟಿ (ಡೆಲಾನೊ ಡಬ್ಲ್ಯು, ಡಿಇಸಿ)–1, ಬಾಲಾಜಿ. ವಿ. (ಲೂಸಿಫರ್‌ ವ್ಯಾನ್‌, ಡಿಇಸಿ)–2, ಆದ್ಯಾ ರಾವ್‌ (ಜೂಲನ್‌, ಎಆರ್‌ಸಿ)–3. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.