ಇಂದು ಮುಂಬೈ ಮ್ಯಾರಥಾನ್‌ಗೆ ಸಚಿನ್ ಚಾಲನೆ ಮುಂಬೈ: ಮಹಾನಗರಿಯಲ್ಲಿ ಭಾನುವಾರ ನಡೆಯಲಿರುವ ಹಾಫ್‌ ಮ್ಯಾರಥಾನ್‌ಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಚಾಲನೆ ನೀಡಲಿದ್ದಾರೆ. ಒಟ್ಟು 13500ಕ್ಕೂ ಹೆಚ್ಚು ಓಟಗಾರರು ಪಾಲ್ಗೊಳ್ಳುವರು. ಮೂರು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.21.1 ಕಿಲೋ ಮೀಟರ್ಸ್ ಓಟದಲ್ಲಿ 4000, 10 ಕಿಲೋಮೀಟರ್ ಓಟದಲ್ಲಿ 7000 ಮತ್ತು 5 ಕಿಲೋ ಮೀಟರ್ ಓಟದಲ್ಲಿ 2500 ಓಟಗಾರರು ಭಾಗವಹಿಸಲಿದ್ದಾರೆ. ‘ಕೋವಿಡ್ ಮಹಾಮಾರಿ ಆರಂಭಗೊಂಡಾಗಿನಿಂದ ಆರೋಗ್ಯ ನಿರ್ವಹಣೆ ಹಾಗೂ ಫಿಟ್‌ನೆಸ್‌ನತ್ತ ಜನರು ಹೆಚ್ಚು ಗಮನ ಹರಿಸುತ್ತಿದ್ದಾರೆ. ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ಜನ ಅರಿತಿದ್ದಾರೆ’ ಎಂದು ಸಚಿನ್ ಅಭಿಪ್ರಾಯಪಟ್ಟಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.