ಬೆಳ್ಳಿ ಜಯಿಸಿದ ಅನುಪಮಾ ನವದೆಹಲಿ: ಭಾರತದ ಅನುಪಮಾ ರಾಮಚಂದ್ರನ್ ಹಾಗೂ ಕೀರ್ತನಾ ಪಾಂಡ್ಯನ್‌ ವಿಶ್ವ ಜೂನಿಯರ್ ಸ್ನೂಕರ್‌ ಚಾಂಪಿಯನ್‌ಷಿಪ್‌ನ 21 ವರ್ಷದೊಳಗಿನವರ ವಿಭಾಗದಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ರುಮೇನಿಯಾದ ಬುಕರೆಸ್ಟ್‌ನಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಮಂಗಳವಾರ ಅನುಪ‍ಮಾ 1–4ರಿಂದ ಥಾಯ್ಲೆಂಡ್‌ನ ಪಂಚಾಯಾ ಚನ್ನೊಯಿ ಎದುರು ಸೋತರು. ಕೀರ್ತನಾ ಕೂಡ 0–3ರಿಂದ ಚನ್ನೊಯಿ ವಿರುದ್ಧವೇ ಮಣಿದು ಕಂಚು ತಮ್ಮದಾಗಿಸಿಕೊಂಡರು. ಅನುಪಮಾ ಅವರು ಕಳೆದ ವರ್ಷ ವಿಶ್ವ ಸ್ನೂಕರ್ ಕ್ವಾಲಿಫೈಯರ್ಸ್‌ನ ಮೊದಲ ಲೆಗ್‌ನಲ್ಲಿ ಪ್ರಶಸ್ತಿ ಜಯಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.