ಟೆನಿಸ್‌: ರಘು, ಶ್ರೀನಿತಿಗೆ ಪ್ರಶಸ್ತಿ ಬೆಂಗಳೂರು: ರಘು ವಿಜಯ್ ಸುಮುಖ್ ಮತ್ತು ಶ್ರೀನಿತಿ ಚೌಧರಿ ಅವರು ಎಐಟಿಎ ಸಿಎಸ್‌7 14 ವರ್ಷದೊಳಗಿನವರ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದರು. ಇಲ್ಲಿಯ ಟಾಪ್‌ಸ್ಪಿನ್ ಅಕಾಡೆಮಿಯಲ್ಲಿ ನಡೆದ ಟೂರ್ನಿಯ ಬಾಲಕರ ವಿಭಾಗದ ಫೈನಲ್‌ನಲ್ಲಿ ರಘು6-3, 6-4ರಿಂದ ಮೂರನೇ ಶ್ರೇಯಾಂಕದ ಲಿಖಿತ್ ಎಸ್‌. ಗೌಡ ಎದುರು ಗೆದ್ದರು. ಬಾಲಕಿಯರ ವಿಭಾಗದ ಪ್ರಶಸ್ತಿ ಸುತ್ತಿನಲ್ಲಿ6-3, 6-4ರಿಂದ ಅಹಿದಾ ಸಿಂಗ್ ಅವರನ್ನು ಪರಾಭವಗೊಳಿಸಿದರು. ಬಾಲಕರ ಡಬಲ್ಸ್‌ನಲ್ಲಿ ರುನ್‌ಮಾನ್ ಮಹೇಶ್–ರಣವೀರ್ ಸಿಂಗ್‌3-6, 6-3, 10-7ರಿಂದ ಆಯಾನ್‌–ಮೋಹಿತ್ ರೆಡ್ಡಿ ಎದುರು ಗೆದ್ದು ಪ್ರಶಸ್ತಿ ತಮ್ಮದಾಗಿಸಿಕೊಂಡರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.