ಮಾರ್ಷಲ್ ಆರ್ಟ್ಸ್: ದುರ್ಗಾಶ್ರೀಗೆ ಕಂಚು ಬೆಂಗಳೂರು: ಕರ್ನಾಟಕದ ದುರ್ಗಾಶ್ರೀ ಜಿ.ಎಂ. ಅವರು ಅಬುಧಾಬಿಯಲ್ಲಿ ಇತ್ತೀಚೆಗೆ ನಡೆದ ಮಿಶ್ರ ಮಾರ್ಷಲ್ ಆರ್ಟ್ಸ್ ವಿಶ್ವ ಯೂತ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ತೀಕ್ಷಾ ಭರುಣಿ ಮತ್ತು ಆರ್ಯನ್ ರಾಜ್ ಕ್ವಾರ್ಟರ್‌ಫೈನಲ್‌ ತಲುಪಿದ್ದರು. ಇವರೆಲ್ಲರೂ ಮಾರ್ಷಲ್‌ ಸೈನ್ಸ್ ಅಕಾಡೆಮಿಯ ವಿಕ್ರಂ, ಕಿರಣ್, ಕಾವ್ಯಾ ಮತ್ತು ಸಮರ್ಥ್ ಅವರ ಬಳಿ ತರಬೇತಿ ಪಡೆದಿದ್ದರು. ಭಾರತ ಒಟ್ಟು ಒಂದು ಬೆಳ್ಳಿ ಮತ್ತು ನಾಲ್ಕು ಕಂಚು ಗಳಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.