ಡಾಡ್ಜ್‌ ಬಾಲ್‌: ರೆಫರಿಯಾಗಿ ವಿಜೇತ್ ಆಯ್ಕೆ ಉಪ್ಪಿನಂಗಡಿ (ದಕ್ಷಿಣ ಕನ್ನಡ): ಡಾಡ್ಜ್‌ ಬಾಲ್‌ ಲೆವೆಲ್‌–1 ರೆಫರಿಯಾಗಿ ಉಪ್ಪಿನಂಗಡಿಯ ವಿಜೇತ್ ಕುಮಾರ್ ಜೈನ್ ಆಯ್ಕೆಯಾಗಿದ್ದಾರೆ. ಮಲೇಷ್ಯಾದಲ್ಲಿ ನಡೆದ ಮೂರು ದಿನಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅವರು ಉಪ್ಪಿನಂಗಡಿಯ ನೆಕ್ಕಿಲಾಡಿ ಹಳೆಯೂರು ನಿವಾಸಿ. ಮೇ 25ರಿಂದ 28ರ ವರೆಗೆ ಮಲೇಷ್ಯಾದಲ್ಲಿ ನಡೆದ ಏಷ್ಯಾ ಪೆಸಿಫಿಕ್ ಡಾಡ್ಜ್ ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡ ಭಾರತ ತಂಡದ ತರಬೇತುದಾರರಾಗಿ ಕಾರ್ಯನಿರ್ವಹಿಸಿದ್ದ ಅವರು ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದರು. ಮಂಗಳೂರು ವಿಶ್ವವಿದ್ಯಾಲಯದಿಂದ ಎಂಪಿಇಡಿ ಗಳಿಸಿದ್ದರು. ವಿಜೇತ್ ಕುಮಾರ್‌, ಹಳೆಯೂರು ನವ ನಿಲಯದ ಪಿ.ಬಿ.ನವೀನ್‌ ಕುಮಾರ್ ಮತ್ತು ಬಿ.ವಿಮಲಾ ದಂಪತಿಯ ಪುತ್ರ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.