ರಾಹುಲ್‌ ಕೂಟ ದಾಖಲೆ ಬೆಂಗಳೂರು: ಮೈಸೂರು ಜಿಲ್ಲೆಯ ರಾಹುಲ್ ಕಶ್ಯಪ್ ಎಸ್‌. ಹಾಗೂ ಮೂಡಬಿದಿರೆಯ ಆಳ್ವಾಸ್‌ ಕಾಲೇಜಿನ ಮಿಲನ್. ಎಂ.ಸಿ. ಅವರು ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ 23 ವರ್ಷದೊಳಗಿನ ಪುರುಷರ ಶಾಟ್‌ಪಟ್‌ ಮತ್ತು 800 ಮೀಟರ್ಸ್ ಓಟದಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು. ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ರಾಹುಲ್‌ 16.68 ಮೀ. ದೂರ ಸಾಧನೆ ಮಾಡಿದರು. ಮಿಲನ್‌ 1 ನಿ. 53.4 ಸೆಕೆಂಡುಗಳಲ್ಲಿ ಗುರಿ ತಲು‍ಪಿದರು. ವೈಭವ್ ಪಾಟೀಲ್ (10,000 ಮೀ.), ಕರಿಷ್ಮಾ ಸನಿಲ್‌ (ಜಾವೆಲಿನ್ ಥ್ರೊ), ಅರ್ಪಿತಾ ಇ.ಬಿ (800 ಮೀ.) ಕೂಡ ಕೂಟ ದಾಖಲೆ ನಿರ್ಮಿಸಿದರು. ಫಲಿತಾಂಶಗಳು: 23 ವರ್ಷದೊಳಗಿನವರು: ಪುರುಷರು: ಶಾಟ್‌ಪಟ್‌: ರಾಹುಲ್ ಕಶ್ಯಪ್ ಎಸ್‌.ಆರ್‌ (ಮೈಸೂರು)–1, ದೂರ: 16.68 ಮೀ. (ಕೂಟ ದಾಖಲೆ), ಮಾನುಷ್‌ ಬಿ. (ಮೈಸೂರು)–2, ಕಾರ್ತಿಕ್‌ ಬಿ. (ಡಿವೈಇಎಸ್‌)–3. 10,000 ಮೀ. ಓಟ: ವೈಭವ್ ಪಾಟೀಲ್‌ (ಡಿವೈಇಎಸ್‌), ಕಾಲ: 32 ನಿ.39 ಸೆ. (ಕೂಟ ದಾಖಲೆ), ಪ್ರಮೋದ್ ಬಿ. (ಹಾವೇರಿ)–2, ಮೊಹಮ್ಮದ್ ಅನ್ನಿಗೇರಿ (ರಾಯಲ್ ಸ್ಪೋರ್ಟ್ಸ್, ಜಿಆರ್‌ಪಿ)–3. 800 ಮೀ.: ಮಿಲನ್ ಎಂ.ಸಿ. (ಆಳ್ವಾಸ್‌)–1, ಕಾಲ: 1 ನಿ.53.4 ಸೆ. (ಕೂಟ ದಾಖಲೆ), ಯಶವಂತ್ ಬಿ.ಜಿ. (ಫ್ಯೂಷನ್‌)–2, ಸೂರ್ಯ ಕೆ. (ಡಿವೈಇಎಸ್‌)–3. ಜಾವೆಲಿನ್ ಥ್ರೊ: ಕೀರ್ತಿರಾಜ್‌ ಕೆ.ಎಸ್. (ದಕ್ಷಿಣ ಕನ್ನಡ)–1, ದೂರ: 55.30 ಮೀ., ಸುನಿಲ್ ಕುಮಾರ್ (ಡಿವೈಇಎಸ್‌)–2, ಶರತ್ ಟಿ.ಎಂ. (ಮೈಸೂರು)–3. ಟ್ರಿಂಪಲ್ ಜಂಪ್‌: ಮಹಾಂತ್‌ ಬಿ. (ಬಾಲದಳ ಸ್ಪೋರ್ಟ್ಸ್)–1, ದೂರ: 14.63 ಮೀ. ಮಹಿಳೆಯರು: 10,000 ಮೀ. ಓಟ: ಧನುಷಾ ಶೆಟ್ಟಿ (ಆಳ್ವಾಸ್‌)–1, ಕಾಲ: 45 ನಿ. 37 ಸೆ., ನಾಗಶ್ರೀ ಎಚ್‌.ಎನ್. (ಶಿವಮೊಗ್ಗ)–2, ವಿಜಯಲಕ್ಷ್ಮಿ ಎಸ್‌. ಗರ್ಗ್‌ (ಉತ್ತರ ಕನ್ನಡ)–3. ಹೈಜಂಪ್‌: ಫ್ಲರ್ವಿಶಾ ವೆಲಿಶಾ (ದ.ಕ)–1, ಎತ್ತರ: 1.65 ಮೀ., ಎಸ್‌.ಬಿ. ಸುಪ್ರಿಯಾ (ಆಳ್ವಾಸ್‌)–2. 800 ಮೀ. ಓಟ: ಅರ್ಪಿತಾ ಇ.ಬಿ. (ಫ್ಯೂಷನ್‌)–1, ಕಾಲ: 2 ನಿ.10.4 (ಕೂಟ ದಾಖಲೆ), ಉಷಾ ಆರ್‌.(ಮೈಸೂರು)–2, ಜ್ಯೋತಿ ಕೆ. (ಧಾರವಾಡ)–3. ಜಾವೆಲಿನ್ ಥ್ರೊ: ಕರೀಷ್ಮಾ ಸನಿಲ್‌ (ಉಡುಪಿ)–1, ದೂರ: 49.35 ಮೀ. (ಕೂಟ ದಾಖಲೆ), ಮೋನಿಷಾ ಎಸ್‌. (ಕ್ಯಾಪ್ಟನ್ ಟಿ.ಎಫ್‌)–2. 100 ಮೀ.: ಕಾವೇರಿ ಎಲ್‌.ಪಾಟೀಲ್ (ಸಾಯ್‌)–1, ಕಾಲ: 12.1 ಸೆ. (ಕೂಟ ದಾಖಲೆ) ಹರ್ಷಿಣಿ ಆರ್‌. (ಮೈಸೂರು)–2, ಸುಪ್ರಿತಾ ಎಚ್‌.ವೈ. (ಮೈಸೂರು)–3. ಶಾಟ್‌ಪಟ್‌: ಅಂಬಿಕಾ ವಿ. (ಮೈಸೂರು)–1, ದೂರ: 12.97 ಮೀ., ಶಿಲ್ಪಾ ಎಸ್‌. (ಮೈಸೂರು)–2, ದಿವ್ಯಾ ಎನ್‌.ಪಿ (ಎಸ್‌ಡಿಎಂ)–3. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.