ಮಂಗಳೂರು ತಾಲ್ಲೂಕು ದಸರಾ ಕ್ರೀಡಾಕೂಟ: ಹರಿಕೃಷ್ಣ, ಮಂಜುಳಾಗೆ ಚಿನ್ನ ಡಬಲ್ ಮಂಗಳೂರು: ಟ್ರ್ಯಾಕ್‌ನಲ್ಲಿ ಮಿಂಚಿದ ಹರಿಕೃಷ್ಣ ಮತ್ತು ಮಂಜುಳಾ ಮಲ್ಯ ಅವರು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ಮಂಗಳೂರು ಮಹಾನಗರ ಪಾಲಿಕೆ ಆಶ್ರಯದಲ್ಲಿ ಶನಿವಾರ ನಡೆದ ಮಂಗಳೂರು ತಾಲ್ಲೂಕು ದಸರಾ ಕ್ರೀಡಾಕೂಟದ 100 ಮತ್ತು 200 ಮೀಟರ್ಸ್ ಓಟದಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳೆಯ ವಿಭಾಗಗಳ ಚಿನ್ನದ ಪದಕ ಕೊರಳಿಗೇರಿಸಿಕೊಂಡರು. ಮಂಗಳಾ ಕ್ರೀಡಾಂಗಣದ ಸಿಂಥೆಟಿಕ್ ಟ್ರ್ಯಾಕ್‌ನಲ್ಲಿ ನಡೆದ ತುರುಸಿನ 100 ಮೀಟರ್ಸ್‌ ಸ್ಪರ್ಧೆಯಲ್ಲಿ ಹರಿಕೃಷ್ಣ 11.50 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಕೂಟದ ವೇಗದ ಓಟಗಾರ ಎನಿಸಿಕೊಂಡರೆ ಮಂಜುಳಾ 13.50 ಸೆಕೆಂಡುಗಳಲ್ಲಿ ಅಂತಿಮ ಗೆರೆ ತುಳಿದು ವೇಗದ ಓಟಗಾರ್ತಿ ಪಟ್ಟ ತಮ್ಮದಾಗಿಸಿಕೊಂಡರು. 200 ಮೀಟರ್ಸ್ ಓಟವನ್ನು ಹರಿಕೃಷ್ಣ 23.63 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದರೆ ಮಂಜುಳಾ ಗುರಿ ಮುಟ್ಟಲು 29.85 ಸೆಕೆಂಡು ತೆಗೆದುಕೊಂಡರು. ಫಲಿತಾಂಶಗಳು: ಪುರುಷರ 100 ಮೀಟರ್ಸ್‌ ಓಟ: ಹರಿಕೃಷ್ಣ–1. ಕಾಲ:11.50 ಸೆ, ನಾಗರಾಜ–2, ಪೃಥ್ವಿರಾಜ್–3; 200 ಮೀ:ಹರಿಕೃಷ್ಣ–1. ಕಾಲ: 23.63 ಸೆ, ಧನುಷ್‌–2, ಲಿಖಿತ್‌–3; 400 ಮೀ: ನೀಲ್ ಕುಂದರ್‌–1. ಕಾಲ: 54.50 ಸೆ, ಕೌಶಿಕ್‌–2, ಮಂಜುನಾಥ್‌–3; 800 ಮೀ: ಸಂಜಯ್‌ ಕುಮಾರ್‌–1. ಕಾಲ: 2ನಿ 10 ಸೆ, ಪೃತ್ವಿ–2, ಲಾರಾ–3; 1500 ಮೀ: ಲಾರಾ–1. ಕಾಲ: 4ನಿ 28.37 ಸೆ, ಗೌತಮ್‌–2, ಪ್ರದೀಪ್‌–3; 5000 ಮೀ: ಶಿವಾನಂದ–1. ಕಾಲ: 20 ನಿ 14.12 ಸೆ, ಭೀಮಪ್ಪ–2, ಮೋಕ್ಷಿತ್‌–3; ಲಾಂಗ್ ಜಂಪ್‌: ಕೌಶಿಕ್‌–1. ಅಂತರ: 6.3 ಮೀ, ತನಿಶ್‌–2, ಹರಿಕೃಷ್ಣ–3;ಹೈಜಂಪ್‌: ಅಭಿಷೇಕ್‌–1. ಎತ್ತರ: 1.60 ಮೀ, ಜೀವನ್‌–2, ಆಲ್ಡನ್ ಜೋಶುವಾ–3; ಡಿಸ್ಕಸ್ ಥ್ರೋ: ರಲನ್ ಮೆನೇಜಸ್‌–1. ದೂರ: 28.6 ಮೀ, ಗಿರಿಧರ್ ಸಾಲ್ಯಾನ್–2, ಲಿಖಿತ್ ಕುಮಾರ್–3; ಶಾಟ್‌ಪಟ್‌: ರಲನ್‌–1. ದೂರ: 10 ಮೀ, ಚಂದ್ರಮೋಹನ್–2, ಫರ್ಹಾನ್–3. ಮಹಿಳೆಯರ 100 ಮೀ ಓಟ: ಮಂಜುಳಾ ಮಲ್ಯ–1. ಕಾಲ: 13.50 ಸೆ, ಕೃಪಾ–2, ಆರತಿ–3; 200 ಮೀ: ಮಂಜುಳಾ ಮಲ್ಯ–1. ಕಾಲ:29.85 ಸೆ, ಕೃಪಾ, ಚೈತ್ರಾ ಶೆಟ್ಟಿ; 400 ಮೀ: ಜ್ಯೋತಿ–1. ಕಾಲ: 1ನಿ 32.12 ಸೆ, ಸಾವಿತ್ರಿ–2, ರೇವತಿ–3; 800 ಮೀ: ಭೂಮಿಕಾ–1. ಕಾಲ: 3ನಿ 45.3 ಸೆ, ವೀಣಾ–2, ಸಂಗೀತಾ–3; 1500 ಮೀ: ಶ್ರುತಿ–1. ಕಾಲ: 8 ನಿ 35.52 ಸೆ, ಡಯಾನಾ–2, ನೇತ್ರಾವತಿ–3; 3000 ಮೀ: ಪೂರ್ಣಿಮಾ–1. ಕಾಲ: 17 ನಿ 25.14 ಸೆ, ವೀಣಾ ಎಸ್‌–2, ರೇವತಿ–3; ಲಾಂಗ್ ಜಂಪ್‌: ವರ್ಷಾ–1. ಅಂತರ: 4.13 ಮೀ, ನಿಶಾ–2, ಆರತಿ–3; ಹೈಜಂಪ್‌: ಹರ್ಷಿತಾ–1. ಎತ್ತರ: 1.5 ಮೀ, ವೀಣಾ–2, ಭಾಗ್ಯಶ್ರೀ–3; ಡಿಸ್ಕಸ್ ಥ್ರೋ: ಪ್ರಾಂಜಲಿ ಎ–1. ದೂರ: 32.42 ಮೀ, ಭಾಗೀರಥಿ ರೈ–2, ಚಂಚಲಾಕ್ಷಿ–3; ಶಾಟ್‌ಪಟ್‌: ಪ್ರಾಂಜಲಿ–1. ದೂರ: 10 ಮೀ, ಅಕ್ಷಾ–2, ಮೇಘಾ ಶೆಟ್ಟಿ–3. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.