ಗಾಲ್ಫ್‌: ಎರಡನೇ ಸ್ಥಾನದಲ್ಲಿ ಅದಿತಿ ನ್ಯೂಜೆರ್ಸಿ: ಎಲ್‌ಪಿಜಿಎ ಟೂರ್‌ನಲ್ಲಿ ಚೊಚ್ಚಲ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಭಾರತದ ಅದಿತಿ ಅಶೋಕ್‌ ಅವರು ಶುಕ್ರವಾರ ಇಲ್ಲಿ ಆರಂಭವಾದ ಮಿಜುಹೊ ಅಮೆರಿಕಸ್ ಓಪನ್‌ ಗಾಲ್ಫ್‌ ಟೂರ್ನಿಯ ಮೊದಲ ಸುತ್ತಿನ ಬಳಿಕ ಎರಡನೇ ಸ್ಥಾನದಲ್ಲಿದ್ದಾರೆ. ಲಿಬರ್ಟಿ ನ್ಯಾಷನಲ್‌ ಗಾಲ್ಫ್‌ ಕೋರ್ಸ್‌ನಲ್ಲಿ ನಡೆಯುತ್ತಿರುವ ಟೂರ್ನಿಯ ಮೊದಲ ಸುತ್ತಿನ ಸ್ಪರ್ಧೆಯನ್ನು ಬೆಂಗಳೂರಿನ ಅದಿತಿ, 67 ಸ್ಟ್ರೋಕ್‌ಗಳೊಂದಿಗೆ ಕೊನೆಗೊಳಿಸಿದರು. 65 ಸ್ಟ್ರೋಕ್‌ಗಳೊಂದಿಗೆ ಸ್ಪರ್ಧೆ ಕೊನೆಗೊಳಿಸಿದ ಅಮೆರಿಕದ ಲಾರೆನ್‌ ಹಾರ್ಟ್ಲೆಜ್ ಅವರು ಅಗ್ರಸ್ಥಾನದಲ್ಲಿದ್ಧಾರೆ. ಐರ್ಲೆಂಡ್‌ನ ಸ್ಟೆಫಾನಿ ಮೆಡೊ ಮತ್ತು ಥಾಯ್ಲೆಂಡ್‌ನ ಅತ್ತಾಯ ತಿಟಿಕುಲ್ (ತಲಾ 68 ಸ್ಟ್ರೋಕ್‌) ಅವರು ಜಂಟಿ ಮೂರನೇ ಸ್ಥಾನದಲ್ಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.