ಹೀರೊ ಮಹಿಳಾ ಪ್ರೊ ಗಾಲ್ಫ್‌ ಟೂರ್‌: ಪ್ರಣವಿ ಚಾಂಪಿಯನ್‌ ಹೈದರಾಬಾದ್‌: ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಂಡಿರುವ ಪ್ರಣವಿ ಅರಸ್‌ ಅವರು ಗುರುವಾರ ಇಲ್ಲಿ ಕೊನೆಗೊಂಡ ಹೀರೊ ಮಹಿಳಾ ಪ್ರೊ ಗಾಲ್ಫ್‌ ಟೂರ್‌ನ 12ನೇ ಲೆಗ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದರು. ಮೂರು ಸುತ್ತುಗಳಲ್ಲಿ ಒಟ್ಟು 208 ಸ್ಕೋರ್‌ಗಳೊಂದಿಗೆ ಪ್ರಣವಿ ಅಗ್ರಸ್ಥಾನ ಪಡೆದರು. ಅವರು ಕ್ರಮವಾಗಿ 68, 68, 72 ಅವಕಾಶಗಳಲ್ಲಿ ಸ್ಪರ್ಧೆ ಕೊನೆಗೊಳಿಸಿದರು. ಮೈಸೂರಿನ ಯುವ ಗಾಲ್ಫರ್‌ಗೆ 12 ಟೂರ್ನಿಗಳಲ್ಲಿ ದೊರೆತ ಐದನೇ ಗೆಲುವು ಇದು. ಸ್ನೇಹಾ ಸಿಂಗ್‌ ಮತ್ತು ಅಮೆಚೂರ್‌ ಆಟಗಾರ್ತಿ ಕೃತಿ ಚೌಹಾಣ್‌ (213) ಅವರು ಜಂಟಿ ಎರಡನೇ ಸ್ಥಾನ ಪಡೆದರು. ಗೌರಿ ಕರಾಡೆ ಮತ್ತು ಸೆಹರ್‌ ಅತ್ವಾಲ್‌ (ತಲಾ 216) ಜಂಟಿ ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡರು. ನಯನಿಕಾ ಸಂಗಾ, ಹೀನಾ ಕಾಂಗ್‌ ಮತ್ತು ವಿಧಾತ್ರಿ ಅರಸ್‌ (ತಲಾ 217) ಅವರು ಜಂಟಿ ಆರನೇ ಸ್ಥಾನ ಗಳಿಸಿದರು. 11ನೇ ಲೆಗ್‌ನಲ್ಲಿ ಚಾಂಪಿಯನ್‌ ಆಗಿದ್ದ ಹಿತಾಶ್ರೀ ಬಕ್ಷಿ (220) ಜಂಟಿ 12ನೇ ಸ್ಥಾನ ಪಡೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.