ಶೂಟಿಂಗ್‌: ಕರ್ನಾಟಕದ ದಿವ್ಯಾ ಟಿ.ಎಸ್‌ಗೆ ಚಿನ್ನ ನವದೆಹಲಿ: ಕರ್ನಾಟಕದ ದಿವ್ಯಾ ಟಿ.ಎಸ್‌. ಅವರು ರಾಷ್ಟ್ರೀಯ ಶೂಟಿಂಗ್ ಟ್ರಯಲ್ಸ್‌ನ ಮಹಿಳೆಯರ 10 ಮೀಟರ್ಸ್ ಏರ್ ಪಿಸ್ತೂಲ್ ಟಿ6 ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದರು. ಇಲ್ಲಿಯ ಕರ್ಣಿಸಿಂಗ್ ಶೂಟಿಂಗ್‌ ರೇಂಜ್‌ನಲ್ಲಿ ನಡೆದ ಫೈನಲ್‌ನಲ್ಲಿ ದಿವ್ಯಾ 16–12ರಿಂದ ಹರಿಯಾಣದ ರಿಧಮ್ ಸಂಗ್ವಾನ್ ಅವರನ್ನು ಸೋಲಿಸಿದರು. ರಿಧಮ್ ಅವರು ಯೂತ್ ಮತ್ತು ಜೂನಿಯರ್ ಏರ್ ಪಿಸ್ತೂಲ್ ಟಿ6 ಟ್ರಯಲ್ಸ್‌ನಲ್ಲಿ ಅಗ್ರಸ್ಥಾನ ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.