ಟಿಟಿ: ವಿಶ್ವ ಚಾಂಪಿಯನ್‌ಷಿಪ್‌ಗೆ ಶರತ್ ಅಲಭ್ಯ ನವದೆಹಲಿ: ಭಾರತದ ಅನುಭವಿ ಆಟಗಾರ ಅಚಂತ ಶರತ್ ಕಮಲ್‌ ಅವರು ವಿಶ್ವ ಟೇಬಲ್ ಟೆನಿಸ್‌ ಚಾಂಪಿಯನ್‌ಷಿಪ್‌ನಿಂದ ಹಿಂದೆ ಸರಿದಿದ್ದಾರೆ. ಸೆಪ್ಟೆಂಬರ್‌ 30ರಿಂದ ಅಕ್ಟೋಬರ್‌ 9ರವರೆಗೆ ಚೀನಾದ ಚೆಂಗ್ಡುನಲ್ಲಿ ಚಾಂಪಿಯನ್‌ಷಿಪ್‌ ನಿಗದಿಯಾಗಿದ್ದು, ವೈಯಕ್ತಿಕ ಕಾರಣಗಳಿಂದಾಗಿ ಶರತ್ ಆಡುತ್ತಿಲ್ಲ. ಇತ್ತೀಚೆಗೆ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 40 ವರ್ಷದ ಶರತ್‌, ಮೂರು ಚಿನ್ನದ ಪದಕ ಜಯಿಸಿದ್ದರು. ಅವರ ಅನುಪಸ್ಥಿತಿಯಲ್ಲಿ ಜಿ.ಸತ್ಯನ್ ಅವರುವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಪುರುಷರ ತಂಡವನ್ನು ಮುನ್ನಡೆಸಲಿದ್ದು, ಮಣಿಕಾ ಬಾತ್ರಾ ಮಹಿಳೆಯ ವಿಭಾಗದ ಸಾರಥ್ಯ ವಹಿಸಲಿದ್ದಾರೆ. ಭಾರತ ತಂಡವು ಸೆ.25ರಂದು ಚೆಂಗ್ಡುಗೆ ತೆರಳುವ ನಿರೀಕ್ಷೆಯಿದೆ. ತಂಡ ಇಂತಿದೆ: ಪುರುಷರು: ಜಿ.ಸತ್ಯನ್‌, ಸನಿಲ್ ಶೆಟ್ಟಿ, ಹರ್ಮೀತ್ ದೇಸಾಯಿ, ಮಾನುಷ್ ಶಾ, ಮಾನವ್ ಥಕ್ಕರ್‌. ಮಹಿಳೆಯರು: ಮಣಿಕಾ ಬಾತ್ರಾ, ಶ್ರೀಜಾ ಅಕುಲಾ, ರೀತ್ ರಿಷ್ಯಾ, ದಿಯಾ ಚಿತಳೆ ಮತ್ತು ಸ್ವಸ್ತಿಕಾ ಘೋಷ್‌. ಕೋಚ್‌ಗಳು: ಎಸ್‌.ರಾಮನ್‌ ಮತ್ತು ಅನಿಂದಿತಾ ಚಕ್ರವರ್ತಿ ಅಥವಾ ಕ್ರಿಸ್‌ ಆ್ಯಡ್ರಿಯನ್‌ ಪಿಫೆರ್‌ (ವೈಯಕ್ತಿಕ ಕೋಚ್‌). ಮಸಾಜ್‌ ತಜ್ಞೆ: ಹರ್ಮೀತ್ ಕೌರ್‌. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.