ಪ್ಯಾರಾ ಶೂಟಿಂಗ್‌ ವಿಶ್ವಕಪ್‌: ಮನೀಶ್‌ಗೆ ಡಬಲ್‌ ಬೆಳ್ಳಿ ನವದೆಹಲಿ: ಭಾರತದ ಮನೀಶ್ ನರ್ವಾಲ್ ಅವರು ಇಲ್ಲಿ ನಡೆಯುತ್ತಿರುವ ಪ್ಯಾರಾ ಶೂಟಿಂಗ್‌ ವಿಶ್ವಕಪ್‌ನ ಪುರುಷರ 10 ಮೀಟರ್ ಏರ್ ಪಿಸ್ತೂಲ್ (ಎಸ್‌ಎಚ್1) ವೈಯಕ್ತಿಕ ಮತ್ತು ತಂಡ ವಿಭಾಗದ ಸ್ಪರ್ಧೆಗಳಲ್ಲಿ ಬೆಳ್ಳಿ ಪದಕ ಗೆದ್ದರು. ಬುಧವಾರ ನಡೆದ ವೈಯಕ್ತಿಕ ವಿಭಾಗದ ಫೈನಲ್‌ನಲ್ಲಿ ಚೀನಾದ ಚಾವೋ ಯಾಂಗ್ (240.3 ಪಾಯಿಂಟ್‌) ಚಿನ್ನ ಗೆದ್ದರೆ, 236.7 ಅಂಕ ಪಡೆದ ನರ್ವಾಲ್‌ ಎರಡನೇ ಸ್ಥಾನ ಗಳಿಸಿದರು. ಕೊರಿಯಾದ ಶೂಟರ್‌ ಜಿಯೋಂಗ್ಡು (214.7) ಕಂಚು ಗೆದ್ದರು. ಇದಕ್ಕೂ ಮುನ್ನ ಅರ್ಹತಾ ಸುತ್ತಿನಲ್ಲಿ ನರ್ವಾಲ್ (574) ಮೂರನೇ ಸ್ಥಾನದೊಂದಿಗೆ ಫೈನಲ್‌ ಪ್ರವೇಶಿಸಿದ್ದರು. ಭಾರತದ ರುದ್ರಾಂಶ್‌ ಖಂಡೇಲ್ವಾಲ್ (564), ಸಂಜೀವ್‌ ಗಿರಿ (559) ಮತ್ತು ಸಿಂಗ್ರಾಜ್ (546) ವಿಫಲರಾಗಿದ್ದರು. ತಂಡ ವಿಭಾಗದ ಸ್ಪರ್ಧೆಯಲ್ಲಿ ನರ್ವಾಲ್, ರುದ್ರಾಂಶ್‌ ಮತ್ತು ಗಿರಿ ಅವರನ್ನು ಒಳಗೊಂಡ ಗುಂಪು ಬೆಳ್ಳಿ ಪದಕವನ್ನು ಗೆದ್ದುಕೊಂಡಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.