ಋತು ಆರಂಭಕ್ಕೆ ಚೋಪ್ರಾ ಸಿದ್ಧತೆ ನವದೆಹಲಿ: ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ಜಾವೆಲಿನ್ ಥ್ರೋಪಟು ನೀರಜ್ ಚೋಪ್ರಾ ಅವರು ಮೇ 10ರಂದು ಆರಂಭವಾಗುವ ಡೈಮಂಡ್ ಲೀಗ್ ಸರಣಿಯ ದೋಹಾ ಲೆಗ್‌ನಲ್ಲಿ ಹೊಸ ಋತು ಆರಂಭಿಸುವ ಸಿದ್ಧತೆಯಲ್ಲಿದ್ದಾರೆ. ಚೀನಾದ ಹಾಂಗ್‌ಝೌನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕದೊಂದಿಗೆ ತನ್ನ ಹಿಂದಿನ ಋತುವನ್ನು ಮುಗಿಸಿದ್ದ 26 ವರ್ಷದ ಚೋಪ್ರಾ, ಜುಲೈ– ಆಗಸ್ಟ್‌ನಲ್ಲಿ ನಡೆಯುವ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಚಿನ್ನವನ್ನು ಉಳಿಸಿಕೊಳ್ಳುವತ್ತ ಚಿತ್ತ ನೆಟ್ಟಿದ್ದಾರೆ. 2023ರ ಬುಡಾಪೆಸ್ಟ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಐದನೇ ಸ್ಥಾನ ಪಡೆದಿದ್ದ ಭಾರತದ ಮತ್ತೊಬ್ಬ ಜಾವೆಲಿನ್ ಥ್ರೋ ಅಥ್ಲೀಟ್ ಕಿಶೋರ್‌ ಜೇನಾ ಅವರು ಕತಾರ್ ರಾಜಧಾನಿಯಲ್ಲಿ ನಡೆಯುವ ಡೈಮಂಡ್ ಲೀಗ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಅವರು ಏಷ್ಯನ್‌ ಗೇಮ್ಸ್‌ನಲ್ಲಿ 87.54 ಮೀ ವೈಯಕ್ತಿಕ ಶ್ರೇಷ್ಠ ಸಾಧನೆಯೊಂದಿಗೆ ಬೆಳ್ಳಿ ಪದಕ ಗೆದ್ದಿದ್ದರು. ಡೈಮಂಡ್‌ ಲೀಗ್‌ನಲ್ಲಿ ಚೋಪ್ರಾ, ಜೇನಾ ಅವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ಜೆಕ್ ಗಣರಾಜ್ಯದ ಜೇಕಬ್ ವಡ್ಲೇಚಾ ಮತ್ತು ಮಾಜಿ ವಿಶ್ವ ಚಾಂಪಿಯನ್ ಗ್ರೆನೆಡಾದ ಆ್ಯಂಡರ್ಸನ್ ಪೀಟರ್ಸ್ ಅವರಂತಹ ಪ್ರತಿಸ್ಪರ್ಧಿಗಳನ್ನು ಎದುರಿಸಲಿದ್ದಾರೆ. ‘ಈ ವರ್ಷ ಒಲಿಂಪಿಕ್ಸ್‌ ಪ್ರಶಸ್ತಿಯನ್ನು ಉಳಿಸಿಕೊಳ್ಳುವುದು ಪ್ರಮುಖ ಗುರಿಯಾಗಿದೆ. ಅದರ ಜತೆಗೆ 90 ಮೀ ಗಡಿಯನ್ನು ದಾಟುವ ಪ್ರಯತ್ನವೂ ಮುಂದುವರಿಯಲಿದೆ. ಈ ವರ್ಷ ಋತುವನ್ನು ಉತ್ತಮವಾಗಿ ಆರಂಭಿಸಲು ದೋಹಾ ಲೆಗ್‌ ಉತ್ತಮ ವೇದಿಕೆಯಾಗಿದೆ’ ಎಂದು 89.94 ಮೀ ವೈಯಕ್ತಿಕ ಸಾಧನೆ ಹೊಂದಿರುವ ಚೋಪ್ರಾ ಹೇಳಿದ್ದಾರೆ. ‘ಕಳೆದ ವರ್ಷ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆಲ್ಲುವುದು ನನ್ನ ಕನಸಾಗಿತ್ತು. ಅದು ನನಸಾಗಿದೆ. ಅದರಲ್ಲೂ ಫೈನಲ್‌ನಲ್ಲಿ ಭಾರತದ ಮೂವರು ಸ್ಪರ್ಧಿಗಳು ಪಾಲ್ಗೊಂಡಿದ್ದು ದೇಶಕ್ಕೆ ಹೆಮ್ಮೆಯ ವಿಚಾರ’ ಎಂದರು. 2024ರ ಡೈಮಂಡ್‌ ಲೀಗ್‌ ಸರಣಿಯಲ್ಲಿ ದೋಹಾ ಲೆಗ್‌ ಮೂರನೇ ಕೂಟವಾಗಿದ್ದು, ವಿಶ್ವದ ನಾಲ್ಕು ಖಂಡಗಳಲ್ಲಿ 15 ಲೆಗ್‌ಗಳು ನಡೆಯಲಿವೆ. ಏ.20ರಂದು ಶಿಯಾಮೆನ್ ಲೆಗ್‌ನಿಂದ ಆರಂಭವಾಗಿ ಬ್ರಸೆಲ್ಸ್‌ನಲ್ಲಿ (ಸೆ.13-14) ನಡೆಯುವ ಫೈನಲ್‌ನೊಂದಿಗೆ ಮುಕ್ತಾಯಗೊಳ್ಳುತ್ತದೆ. ಶಿಯಾಮೆನ್ ಮತ್ತು ಶಾಂಘೈನಲ್ಲಿ ನಡೆಯುವ ಮೊದಲೆರಡು ಲೆಗ್‌ನಲ್ಲಿ ಪುರುಷರ ಜಾವಲೆನ್‌ ಥ್ರೋ ಸ್ಪರ್ಧೆ ಇರುವುದಿಲ್ಲ. - 10, , 28 () 10 - . 26-- , , , . ' , 2023 87.54m, . - ' , 2023 . “ , , 90m . , , ," , 89.94m, . "’ . .” ( 89.54m), ( 89.83m), ( 85.23m), ( 89.17m) ( 84.28m). 2023 88.67m, . , 10. , 12 , - 2022 (93.07m), , - 2023, 2022 90m (90.88m). ’ . “ , - ’ ,” . 2024 15 , 20 ( 13-14). ' . ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.